ಸೋಲಿನಲ್ಲೂ ಇತಿಹಾಸ ಬರೆದ ಅರ್ಚನಾ

ಬೆಂಗಳೂರು: ಭರವಸೆಯ ಯುವ ಆಟಗಾರ್ತಿ ಕರ್ನಾಟಕದ ಅರ್ಚನಾ ಕಾಮತ್ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆಯುತ್ತಿರುವ ಐಟಿಟಿಎಫ್ ವಿಶ್ವ ಜೂನಿಯರ್ ಸರ್ಕೀಟ್ ಫೈನಲ್ಸ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಂಡರು. ಈ ನಿರಾಸೆಯ ನಡುವೆಯೂ ಅವರು ಇತಿಹಾಸ ಬರೆದರು.
ಜೂನಿಯರ್ ಮಟ್ಟದ ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿರುವ ಅರ್ಚನಾ ಈ ಟೂರ್ನಿಯಲ್ಲಿ ಎಂಟರ ಘಟ್ಟ ತಲುಪಿದ ಭಾರತದ ಮೊದಲ ಆಟಗಾರ್ತಿ ಎನ್ನುವ ಕೀರ್ತಿ ಪಡೆದರು. ಶನಿವಾರ ನಡೆದ ಹೋರಾಟದಲ್ಲಿ ಅರ್ಚನಾ 0–4ರಲ್ಲಿ ರುಮೇನಿಯಾದ ಅಡಿನಾ ಡಿಕೊನು ಎದುರು ಸೋತರು.
ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಅಡಿಯಾನ್ 11–6, 11–6, 11–4, 11–6ರಲ್ಲಿ ಎದುರು ಜಯ ಪಡೆದರು. ಕೊರಿಯಾದ ಪಾರ್ಕ್ ಸೆರಿ 4–0ರಲ್ಲಿ ಚೀನಾ ತೈಪೆಯ ಲಿನ್ ಚಾನ್ ಸುನ್ ಮೇಲೂ ಗೆಲುವು ಸಾಧಿಸಿದರು.
ಅರ್ಚನಾ ಇಟಲಿಯನ್ ಜೂನಿಯರ್ ಟೆನಿಸ್ ಟೂರ್ನಿಯ ಕೆಡೆಟ್ ಸಿಂಗಲ್ಸ್ ಮತ್ತು ತಂಡ ವಿಭಾಗದಲ್ಲಿ ಎರಡು ಕಂಚು ಜಯಿಸಿದ್ದರು. ಈ ಆಟಗಾರ್ತಿ ಸಬ್ ಜೂನಿಯರ್ ಬಾಲಕಿಯರ ಮತ್ತು ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಅಗ್ರ ರ್ಯಾಂಕಿಂಗ್ ಹೊಂದಿದ್ದರು. ಇಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲಿ ಅರ್ಚನಾ ಒಟ್ಟಾರೆಯಾಗಿ ಐದನೇ ಸ್ಥಾನ ಪಡೆದರು.
ರುಮೇನಿಯದ ಆಟಗಾರ್ತಿ ನಾಲ್ಕು ಗೇಮ್ಗಳಲ್ಲಿ ಉತ್ತಮ ಹೋರಾಟ ತೋರಿದರು. ಗೇಮ್ ಆರಂಭದಿಂದಲೇ ವೇಗವಾಗಿ ಪಾಯಿಂಟ್ಸ್ ಕಲೆ ಹಾಕಲು ಒತ್ತು ನೀಡಿ ಅರ್ಚನಾ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿದರು. ನಾಲ್ಕೂ ಗೇಮ್ಗಳಲ್ಲಿ ಬೆಂಗಳೂರಿನ ಅರ್ಚನಾ ಪ್ರಬಲ ಪ್ರತಿರೋಧ ತೋರಲು ಸಾಧ್ಯವಾಗಲಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.