ಸೋಲಿನ ಅಂಚಿನಲ್ಲಿ ಗೆಲ್ಲುವವನೆ ಧೀರ

7

ಸೋಲಿನ ಅಂಚಿನಲ್ಲಿ ಗೆಲ್ಲುವವನೆ ಧೀರ

Published:
Updated:

ಕಾರಟಗಿ:  ಧೀರ, ಶೂರ, ಧೈರ್ಯವಂತ ಅಂದರೆ ಕೈಯಲ್ಲಿ ಖಡ್ಗವಿಡಿದು ಹೋರಾಡುವವನಲ್ಲ. ಜೀವನದ ಸೋಲಿನ ಕೊನೆಯ ಅಂಚಿನಲ್ಲಿರುವವರು ಗೆಲುವು ಸಾಧಿಸಿ, ಸಾಧನೆಯ ಗುರಿ ತಲುಪುವವರೆ ಧೀರರು, ಶೂರರು. ಪ್ರಾಮಾಣಿಕತೆ, ಶ್ರದ್ಧೆ, ನಂಬಿಕೆ, ಗುರಿ ಇದ್ದರೆ ಮನುಷ್ಯ ಏನೆಲ್ಲಾ ಸಾಧಿಸಬಹುದು. ಅದಕ್ಕೆ ಕನಸು ಕಾಣುವಾಗ ಬಹುದೊಡ್ಡ ಕನಸು ಕಾಣಬೇಕು ಎಂದು ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.ಇಲ್ಲಿ ಶುಕ್ರವಾರ ಆರಂಭಗೊಂಡ ಭಾಗ್ಯಜ್ಯೋತಿ ಆಗ್ರೋ ಫುಡ್ಸ್, ಡ್ರೈಯರ್ ಇಂಡಸ್ಟ್ರೀಸ್‌ನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಕನಸುಗಳಿರದಿದ್ದರೆ ಜೀವನವೇ ಪರಿಪೂರ್ಣವಲ್ಲ. ಹಗಲುಗನಸಿನ ಬದಲು ಬಹುದೊಡ್ಡ ಕನಸನ್ನು ಕಾಣುವ, ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಯತ್ನಿಸುವ ಮನೋಭಾವ ರೂಡಿಸಿಕೊಳ್ಳಬೇಕು ಎಂದರು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಶಾಸ್ವತಯ್ಯಸ್ವಾಮಿ ಮುಕ್ಕುಂದಿಮಠ ಮಾತನಾಡಿ, ಪ್ರತಿಯೊಬ್ಬರೂ ಉಪಕಾರ ಮಾಡಿದವರ ಸ್ಮರಣೆಯಲ್ಲಿರಬೇಕು ಎಂದರು.ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ರೈಸ್‌ಮಿಲ್ ಮಾಲೀಕ ಎಸ್. ಅಮರಯ್ಯಸ್ವಾಮಿ ಮಾತನಾಡಿ, ತಮ್ಮ ಯಶಸ್ಸಿನ ಹಿಂದಿರುವವರನ್ನು ಸ್ಮರಿಸಿದರು. ಶಿವಶರಣ ವೀರಭದ್ರಯ್ಯಸ್ವಾಮಿ ತಲೇಖಾನ್‌ಮಠ, ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಸುಂಕದ ಲಿಂಗಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ವೀರೇಶ್ ಸಾಲೋಣಿ, ಮಾಜಿ ಸದಸ್ಯ ಸಿದ್ರಾಮಯ್ಯಸ್ವಾಮಿ ಆನೇಗೊಂದಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎಂ. ಎಸ್. ಗೋಪಾಲಕೃಷ್ಣ ಉಪಸ್ಥಿತರಿದ್ದರು. ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು. ಸಿ. ಎ. ಹಿರೇಮಠ ನಿರೂಪಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry