ಶುಕ್ರವಾರ, ಮಾರ್ಚ್ 5, 2021
30 °C

ಸೋಲಿನ ದವಡೆಯಲ್ಲಿ ವಿಂಡೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲಿನ ದವಡೆಯಲ್ಲಿ ವಿಂಡೀಸ್

ಕಿಂಗ್‌ಸ್ಟನ್, ಜಮೈಕಾ: ಅನುಮಾನವೇ ಬೇಡ...! ಭಾರತದ ಬೌಲರ್‌ಗಳು ಕೆರಿಬಿಯನ್ ನಾಡಿನಲ್ಲಿ ಮತ್ತೆ ಮಿಂಚುತ್ತಿದ್ದಾರೆ. ಪುಟಿದೇಳುವ ಪಿಚ್‌ನಲ್ಲಿ ಉಭಯ ತಂಡಗಳು ನಾ ಮುಂದು ತಾ ಮುಂದು ಎಂದು ವಿಕೆಟ್ ಪಡೆಯಲು ಪೈಪೋಟಿ ನಡೆಸಿದ್ದಾರೆ. ಆದರೆ ಈ ಪೈಪೋಟಿಯಲ್ಲಿ ಮುನ್ನಡೆ ಸಾಧಿಸಿದ್ದು ಮಾತ್ರ `ಮಹಿ~ ಪಡೆಯ ಬೌಲರ್‌ಗಳು..!ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್‌ನ ಮೊದಲ ದಿನದಿಂದಲೂ ಬೌಲರ್‌ಗಳ ಪರಾಕ್ರಮಕ್ಕೆ ತಗ್ಗಿದ ಬ್ಯಾಟ್ಸ್‌ಮನ್‌ಗಳು ಅಷ್ಟೇನೂ ಪ್ರಭಾವಿಯಾಗಿ ಹೊರ ಹೊಮ್ಮಲಿಲ್ಲ.ಆದರೆ `ಗೋಡೆ~ ಖ್ಯಾತಿಯ ಕರ್ನಾಟಕದ ರಾಹುಲ್ ದ್ರಾವಿಡ್ ಈ ಅಪವಾದದಿಂದ ಹೊರಗುಳಿದರು. ಪರಿಣಾಮ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 112 ರನ್‌ಗಳ ಭರ್ಜರಿ ಕಾಣಿಕೆ ನೀಡಿದರು.ದ್ರಾವಿಡ್ ಹೊರತು ಪಡಿಸಿದರೆ, ಉಳಿದ ಬ್ಯಾಟ್ಸ್ ಮನ್‌ಗಳು ಗಮನಾರ್ಹ ಪ್ರದರ್ಶನವನ್ನೇನೂ ನೀಡಲಿಲ್ಲ. ಲಕ್ಷ್ಮಣ್ ಹಾಗೂ ಪ್ರವೀಣ್ ಕುಮಾರ್ ಅವರಂಥೂ `ಸೊನ್ನೆ~ ಸುತ್ತಿದರು.ಭಾರತದ ಬ್ಯಾಟ್ಸ್ ಮನ್‌ಗಳನ್ನು ಕಾಡಿದ ಡೆರನ್ ಬ್ರಾವೊ ಹಾಗೂ ದೇವೀಂದ್ರ ಬಿಶೂ ಅವರು ತಲಾ ನಾಲ್ಕು ವಿಕೆಟ್ ಪಡೆದು ಭಾರತವನ್ನು ಅಲ್ಪ ಮೊತಕ್ಕೆ ನಿಯಂತ್ರಿಸಿದರು. ಈ ಪರಿಣಾಮ ಭಾರತ ಎರಡನೇ ಇನಿಂಗ್ಸ್‌ನಲ್ಲಿ 94.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 252 ರನ್ ಗಳಿಸಿತು.ಬೌಲರ್‌ಗಳಿಗೆ ನೆರವು ನೀಡುತ್ತಿರುವ ಪಿಚ್‌ನಲ್ಲಿ ಗೆಲುವಿನ ದಡ ಸೇರಲು ಈ ಮೊತ್ತ ಸಾಕು ಎನ್ನುವ ಭಾವನೆ ಮಹೇಂದ್ರ ಸಿಂಗ್ ದೋನಿ ಪಡೆಗೆ ಖಚಿತವಾದ್ದಂತಿತ್ತು. ವಿಂಡೀಸ್ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ ಎರಡನೇ ಇನಿಂಗ್ಸ್‌ನಲ್ಲಿ 58 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡು 226 ರನ್‌ಗಳನ್ನು ಮಾತ್ರ  ಕಲೆ ಹಾಕಿದ್ದೆ ಅದಕ್ಕೆ ಸಾಕ್ಷಿ.ಸಮಿ ಪಡೆ ಸೋಲಿನ ದವಡೆಯಿಂದ ಪಾರಾಗಬೇಕಾದರೆ ಇನ್ನೂ 100 ರನ್ ಗಳಿಸಬೇಕಿದ್ದು ಕೇವಲ ಒಂದು ವಿಕೆಟ್ ಮಾತ್ರ ಬಾಕಿಯಿವೆ. ಆದ್ದರಿಂದ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು ಬಹುತೇಕ ಖಚಿತವಾಗಿದೆ.ವಿಂಡೀಸ್ ತಂಡವನ್ನು `ಕಷ್ಟ~ದ ಹಾದಿಗೆ ತಳ್ಳಿದ ಕೀರ್ತಿ ಸಲ್ಲಬೇಕಿದ್ದು ಪ್ರವಾಸಿ ತಂಡದ ಬೌಲರ್‌ಗಳಿಗೆ. ಪ್ರವೀಣ್ ಕುಮಾರ್ ತಮ್ಮ ಸೊಗಸಾದ ಬೌಲಿಂಗ್‌ನ ಮೂಲಕ ಅಡ್ರಿಯಾನ್ ಭರತ್, ಚಂದ್ರಪಾಲ್ ಸೇರಿದಂತೆ ಒಟ್ಟು ಮೂವರು ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಪ್ರವೀಣ್ ಕುಮಾರ್‌ಗೆ ಸಾಥ್ ನೀಡಿದ ಇಶಾಂತ್ ಶರ್ಮ ಹಾಗೂ ಅಮಿತ್ ಮಿಶ್ರಾ ತಲಾ ಎರಡು ವಿಕೆಟ್ ಪಡೆದು ಆತಿಥೇಯ  ತಂಡಕ್ಕೆ ಅಪಾಯ 

ಒಡ್ಡಿದರು.

 

ಸ್ಕೋರ್ ವಿವರ

ಭಾರತ ಮೊದಲ ಇನಿಂಗ್ಸ್ 61.2 ಓವರ್‌ಗಳಲ್ಲಿ 246

ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 67.5

 ಓವರ್‌ಗಳಲ್ಲಿ 173

ಎರಡನೇ ಇನಿಂಗ್ಸ್ 94.5 ಓವರ್‌ಗಳಲ್ಲಿ 252ರಾಹುಲ್ ದ್ರಾವಿಡ್ ಸಿ ಸರವಣ್ ಬಿ ಬಿಶೂ  112

ಮಹೇಂದ್ರ ಸಿಂಗ್ ದೋನಿ ಸಿ ಎಡ್ವರ್ಡ್ಸ್ ಬಿ ಬಿಶೂ  16

ಹರಭಜನ್ ಸಿಂಗ್ ಎಲ್‌ಬಿಡಬ್ಲ್ಯು ಬಿ ಸಮಿ  05

ಪ್ರವೀಣ್ ಕುಮಾರ್ ಬಿ ಸಮಿ  00

ಅಮಿತ್ ಮಿಶ್ರಾ ಸಿ ಬ್ರೆವೊ ಬಿ ಸಮಿ  28

ಇಶಾಂತ್ ಶರ್ಮ ಔಟಾಗದೇ  05

ಇತರೆ: ( ಬೈ-8, ಲೆಗ್ ಬೈ- 2,ನೋ ಬಾಲ್-9) 19

ವಿಕೆಟ್ ಪತನ: 1-0 (ವಿಜಯ್; 1.2), 2-56 (ಮುಕುಂದ್; 24.3), 3-57 (ಲಕ್ಷ್ಮಣ್; 25.5), 4-100 (ಕೊಹ್ಲಿ; 44.3), 5-148 (ರೈನಾ; 62.2), 6-166 (ದೋನಿ; 66.6), 7-183 (ಹರಭಜನ್ ಸಿಂಗ್; 74.4), 8-183 (ಪ್ರವೀಣ್ ಕುಮಾರ್; 74.6), 9-239 (ಅಮಿತ್ ಮಿಶ್ರಾ; 91.5), 10-252 (ದ್ರಾವಿಡ್; 94.5).

ಬೌಲಿಂಗ್ ವಿವರ: ಫಿಡೆಲ್ ಎಡ್ವರ್ಡ್ಸ್ 20-1-70-1, ರವಿ ರಾಂಪಾಲ್ 22-3-79-1, ಡೆರನ್ ಸಮಿ 27-11-57-4, ದೇವೇಂದ್ರ ಬಿಶೂ 24.5-2-65-4, ಬ್ರೆಂಡನ್ ನ್ಯಾಶ್ 1-0-6-0.ಎರಡನೇ ಇನಿಂಗ್ಸ್‌ನಲ್ಲಿ 47.5 ಓವರ್‌ಗಳಲ್ಲಿ

ಆರು ವಿಕೆಟ್‌ಗೆ 179

ಅಡ್ರಿಯಾನ್ ಭರತ್ ಸಿ ರೈನಾ ಬಿ ಪ್ರವೀಣ್ ಕುಮಾರ್  38

ಲೆಂಡ್ಲ್ ಸಿಮಾನ್ಸ್ ಬಿ ಶರ್ಮ  27

ರಾಮನರೇಶ ಸರವಣ್ ಸಿ ಕೊಹ್ಲಿ ಬಿ ಶರ್ಮ  00

ಡೆರನ್ ಬ್ರಾವೊ ಬಿ ಪ್ರವೀಣ್ ಕುಮಾರ್  41

ಚಂದ್ರಪಾಲ್ ಸಿ ರೈನಾ ಬಿ ಪ್ರವೀಣ್ ಕುಮಾರ್  30

ಬ್ರೆಂಡನ್ ನ್ಯಾಶ್ ಔಟಾಗದೇ  06

ಕಾಲಟನ್ ಬಗ್ ಸಿ ಕೊಹ್ಲಿ ಬಿ ಹರಭಜನ್ ಸಿಂಗ್  00

ಡೆರನ್ ಸಮಿ ಔಟಾಗದೇ  25

ಇತರೆ: (ಲೆಗ್ ಬೈ-12)   12

ವಿಕೆಟ್ ಪತನ: 1-62 (ಭರತ್; 10.6), 2-63 (ಸರವಣ್ 11.3), 3-80(ಸಿಮಾನ್ಸ್; 15.1), 4-148 (ಬ್ರಾವೊ 38.3), 5-149 (ಚಂದ್ರಪಾಲ್; 40.5), 6-150 (ಬಗ್; 43.1).

ಬೌಲಿಂಗ್ ವಿವರ: ಪ್ರವೀಣ್ ಕುಮಾರ್ 16-3-42-3, ಇಶಾಂತ್ ಶರ್ಮ 12.5-2-55-2, ಅಮಿತ್ ಮಿಶ್ರಾ 4-0-23-0, ಹರಭಜನ್ ಸಿಂಗ್ 9-2-38-1, ಸುರೇಶ್ ರೈನಾ 6-1-9-0.   (ವಿವರ ಅಪೂರ್ಣ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.