ಗುರುವಾರ , ನವೆಂಬರ್ 21, 2019
26 °C

ಸೋಲುವುದೇ ಜಯ?

Published:
Updated:

`ರೇಣುಕಾಚಾರ್ಯ ವಿರುದ್ಧ ಜಯಲಕ್ಷ್ಮಿ?' (ಪ್ರ.ವಾ., ಏ. 4). ಇದೀಗ ಮಜಾ, ಮತದಾರರಿಗೆ! `ಜಯ'ಲಕ್ಷ್ಮಿಯೆದುರು ಆಚಾರ್ಯ ಸಂತೋಷದಿಂದ ಸೋಲೊಪ್ಪಿಕೊಳ್ಳಬಹುದು; ಅಷ್ಟೇಕೆ, ತಮ್ಮ ಸೋಲಿಗಾಗಿ ತಾವೇ ಒಳಗೊಳಗೆ ಪ್ರಯತ್ನಿಸಲೂಬಹುದು!`ಶ್ರೀ ರಾಮಾಯಣ ದರ್ಶನ'ದಲ್ಲಿ ಒಂದು ಮಾತು ಬರುತ್ತದೆ: “ತನ್ನವರ್ ಗೆಲ್ಲುವೊಡೆ ತನಗೆ ಸೋಲ್ವುದೆ ಜಯಂ!” ಹಾಗೆಯೆ, (ಮಾಜಿ) ಪ್ರೇಯಸಿ ಗೆಲ್ಲುವುದಾದರೆ, ತಾನು ಸೋಲುವುದೆ (ಪ್ರಿಯನಿಗೆ) ಜಯ ಎನ್ನಬಹುದೆ? ಅಂತೂ ಆ ಮಧುರ, ವರ್ಣರಂಜಿತ ಸ್ಪರ್ಧೆ ಜಯಾಪಜಯಗಳನ್ನು ಕಾದುನೋಡೋಣ!

 

ಪ್ರತಿಕ್ರಿಯಿಸಿ (+)