ಸೋಲು ತಪ್ಪಿಸಲು ಪರದಾಟ

7

ಸೋಲು ತಪ್ಪಿಸಲು ಪರದಾಟ

Published:
Updated:
ಸೋಲು ತಪ್ಪಿಸಲು ಪರದಾಟ

ಲಂಡನ್: ಒಂದೂವರೆ ತಿಂಗಳ ಹಿಂದೆಯಷ್ಟೆ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ ತಂಡ ಇದೀಗ `ಕ್ಲೀನ್‌ಸ್ವೀಪ್~ ಅವಮಾನದ ಹೊಸ್ತಿಲಲ್ಲಿದೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಕ್ರಿಕೆಟ್ ಟೆಸ್ಟ್‌ನಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ ಸೋಲು ತಪ್ಪಿಸಲು ಪರದಾಟ ನಡೆಸುತ್ತಿದೆ.ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಫಾಲೋಆನ್‌ಗೆ ಒಳಗಾದ ಭಾರತ ನಾಲ್ಕನೇ ದಿನದಾಟದ ಚಹಾ ವಿರಾಮದ ಬಳಿಕ ತನ್ನ ಎರಡನೇ ಇನಿಂಗ್ಸ್‌ನಲ್ಲಿ 22 ಓವರ್ 2 ವಿಕೆಟ್‌ಗೆ 81 ಗಳಿಸಿದೆ.

ಇನಿಂಗ್ಸ್ ಸೋಲು ತಪ್ಪಿಸಲು ಇನ್ನೂ 210 ಗಳಿಸಬೇಕಿದೆ. ಭಾರತ ಈ ಪಂದ್ಯದಲ್ಲಿ ಡ್ರಾ ಸಾಧಿಸಿ `ಕ್ಲೀನ್‌ಸ್ವೀಪ್~ ಅವಮಾನದಿಂದ ಪಾರಾಗಲು ಅಂತಿಮ ದಿನ ಪವಾಡ ನಡೆಯುವುದು ಅಗತ್ಯ.ರಾಹುಲ್ ದ್ರಾವಿಡ್ (ಅಜೇಯ 146) ಅವರ ಸೊಗಸಾದ ಶತಕದ ನೆರವಿನಿಂದ ಮಹೇಂದ್ರ ಸಿಂಗ್ ದೋನಿ ಬಳಗ ಮೊದಲ ಇನಿಂಗ್ಸ್‌ನಲ್ಲಿ 300 ರನ್ ಗಳಿಸಿತು. ಎದುರಾಳಿ ತಂಡಕ್ಕೆ 291 ರನ್‌ಗಳ ಭಾರಿ ಮುನ್ನಡೆ ಬಿಟ್ಟುಕೊಟ್ಟು ಎರಡನೇ ಇನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡ ಕುಸಿತದ ಹಾದಿ ಹಿಡಿದಿದೆ.ಮೊದಲ ಇನಿಂಗ್ಸ್‌ನಲ್ಲಿ ಸುದೀರ್ಘ ಅವಧಿ ಆಡಿ ಬಳಲಿದ್ದ ದ್ರಾವಿಡ್ ಎರಡನೇ ಇನಿಂಗ್ಸ್‌ನಲ್ಲಿ ಬೇಗನೇ ಮರಳಿದರು. 13 ರನ್ ಗಳಿಸಿ ಗ್ರೇಮ್ ಸ್ವಾನ್‌ಗೆ ವಿಕೆಟ್ ಒಪ್ಪಿಸಿದರು. ಸೆಹ್ವಾಗ್ (33) ಉತ್ತಮ ಆರಂಭ ಪಡೆದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಲಕ್ಷ್ಮಣ್ (8) ಹಾಗೂ ಸಚಿನ್ ತೆಂಡೂಲ್ಕರ್ (13) ಅವರು ಕ್ರೀಸ್‌ನಲ್ಲಿದ್ದು, ಹೋರಾಟ ಮುಂದುವರಿಸಿದ್ದಾರೆ.ದ್ರಾವಿಡ್ ಏಕಾಂಗಿ ಹೋರಾಟ: ಇದಕ್ಕೂ ಮೊದಲು 5 ವಿಕೆಟ್‌ಗೆ 103 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ 300 ರನ್‌ಗಳಿಗೆ ಆಲೌಟಾಯಿತು. ಪ್ರಸಕ್ತ ಸರಣಿಯಲ್ಲಿ ಭಾರತ ಪೇರಿಸಿದ ಅತಿದೊಡ್ಡ ಮೊತ್ತ ಇದು.ಇದಕ್ಕೆ ಕಾರಣ ದ್ರಾವಿಡ್ ಅವರ ಏಕಾಂಗಿ ಹೋರಾಟ. ಕರ್ನಾಟಕದ ಈ ಬ್ಯಾಟ್ಸ್‌ಮನ್ ಅಜೇಯ 146 ರನ್ ಗಳಿಸಿದರು. ತಾನು ಇನ್ನೂ `ಗೋಡೆ~ಯಾಗಿಯೇ ಉಳಿದಿದ್ದೇನೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. 266 ಎಸೆತಗಳನ್ನು ಎದುರಿಸಿದ ಅವರು 20 ಬೌಂಡರಿ ಗಳಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದು ಕೊನೆಯವರೆಗೂ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದರು.ದ್ರಾವಿಡ್‌ಗೆ ಇದು 35ನೇ ಟೆಸ್ಟ್ ಶತಕ. ಈ ಮೂಲಕ ಸುನಿಲ್ ಗಾವಸ್ಕರ್ (34) ಅವರನ್ನು ಹಿಂದಿಕ್ಕಿ ಅತ್ಯಧಿಕ ಶತಕ ಗಳಿಸಿದ ಭಾರತದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.ಭಾನುವಾರ ಮೊದಲ ವಿಕೆಟ್ ರೂಪದಲ್ಲಿ ಔಟಾದದ್ದು ದೋನಿ. ನಾಯಕನ ಗಳಿಕೆ ಕೇವಲ 17. ಈ ಹಂತದಲ್ಲಿ ದ್ರಾವಿಡ್ ಮತ್ತು ಅಮಿತ್ ಮಿಶ್ರಾ (43) ಏಳನೇ ವಿಕೆಟ್‌ಗೆ 87 ರನ್‌ಗಳನ್ನು ಸೇರಿಸಿ ಇಂಗ್ಲೆಂಡ್‌ಗೆ ಅಡ್ಡಿಯಾದರು. ಟಿಮ್ ಬ್ರೆಸ್ನನ್ (54ಕ್ಕೆ 3) ಮತ್ತು ಗ್ರೇಮ್ ಸ್ವಾನ್ (102ಕ್ಕೆ 3) ಯಶಸ್ವಿ ಬೌಲರ್ ಎನಿಸಿದರು.ಸ್ಕೋರ್ ವಿವರ

ಇಂಗ್ಲೆಂಡ್: ಮೊದಲ ಇನಿಂಗ್ಸ್: 153 ಓವರ್‌ಗಳಲ್ಲಿ

6 ವಿಕೆಟ್ ನಷ್ಟಕ್ಕೆ 591 ಡಿಕ್ಲೇರ್ಡ್‌

ಭಾರತ: ಮೊದಲ ಇನಿಂಗ್ಸ್ 94 ಓವರ್‌ಗಳಲ್ಲಿ 300


ವೀರೇಂದ್ರ ಸೆಹ್ವಾಗ್ ಎಲ್‌ಬಿಡಬ್ಲ್ಯು ಬಿ ಜೇಮ್ಸ ಆ್ಯಂಡರ್ಸನ್  08

ರಾಹುಲ್ ದ್ರಾವಿಡ್ ಔಟಾಗದೆ  146

ವಿ.ವಿ.ಎಸ್.ಲಕ್ಷ್ಮಣ್ ಸಿ ಮ್ಯಾಟ್ ಪ್ರಯರ್ ಬಿ ಸ್ಟುವರ್ಟ್ ಬ್ರಾಡ್  02

ಸಚಿನ್ ತೆಂಡೂಲ್ಕರ್ ಸಿ ಆ್ಯಂಡರ್ಸನ್ ಬಿ ಗ್ರೇಮ್ ಸ್ವಾನ್  23

ಸುರೇಶ್ ರೈನಾ ಸ್ಟಂಪ್ಡ್ ಮ್ಯಾಟ್ ಪ್ರಯರ್ ಬಿ ಗ್ರೇಮ್ ಸ್ವಾನ್  00

ಇಶಾಂತ್ ಶರ್ಮ ಸಿ ಅಲಿಸ್ಟರ್ ಕುಕ್ ಬಿ ಗ್ರೇಮ್ ಸ್ವಾನ್  01

ಮಹೇಂದ್ರ ಸಿಂಗ್ ದೋನಿ ಸಿ ಪ್ರಯರ್ ಬಿ ಜೇಮ್ಸ ಆ್ಯಂಡರ್‌ಸನ್  17

ಅಮಿತ್ ಮಿಶ್ರಾ ಸಿ ಬೆಲ್ ಬಿ ಟಿಮ್ ಬ್ರೆಸ್ನನ್  43

ಗೌತಮ್ ಗಂಭೀರ್ ಸಿ ಪೀಟರ್‌ಸನ್ ಬಿ ಸ್ಟುವರ್ಟ್ ಬ್ರಾಡ್  10

ಆರ್‌ಪಿ ಸಿಂಗ್ ಸಿ ಆ್ಯಂಡರ್‌ಸನ್ ಬಿ ಟಿಮ್ ಬ್ರೆಸ್ನನ್  25

ಎಸ್. ಶ್ರೀಶಾಂತ್ ಸಿ ಮಾರ್ಗನ್ ಬಿ ಟಿಮ್ ಬ್ರೆಸ್ನನ್  00

ಇತರೆ: (ಬೈ-8, ಲೆಗ್‌ಬೈ-9, ವೈಡ್-7, ನೋಬಾಲ್-1)  25

ವಿಕೆಟ್ ಪತನ: 1-8 (ಸೆಹ್ವಾಗ್; 0.6), 2-13 (ಲಕ್ಷ್ಮಣ್; 3.6), 3-68 (ಸಚಿನ್; 18.2), 4-93 (ರೈನಾ; 28.5), 5-95 (ಇಶಾಂತ್; 30.6), 6-137 (ದೋನಿ; 45.4), 7-224 (ಮಿಶ್ರಾ; 69.3), 8-264 (ಗಂಭೀರ್; 87.3), 9-300 (ಆರ್‌ಪಿ ಸಿಂಗ್; 93.4), 10-300 (ಶ್ರೀಶಾಂತ್; 93.6).

ಬೌಲಿಂಗ್: ಜೇಮ್ಸ ಆ್ಯಂಡರ್ಸನ್ 16-7-49-2, ಸ್ಟುವರ್ಟ್ ಬ್ರಾಡ್ 21-3-51-2, ಟಿಮ್ ಬ್ರೆಸ್ನನ್ 17-3-54-3, ಗ್ರೇಮ್ ಸ್ವಾನ್ 31-5-102-3, ಕೆವಿನ್ ಪೀಟರ್ಸನ್ 7-1-27-0, ರವಿ ಬೋಪಾರ 2-2-0-0

ಭಾರತ: ಎರಡನೇ ಇನಿಂಗ್ಸ್ 22 ಓವರ್‌ಗಳಲ್ಲಿ 2 ವಿಕೆಟ್‌ಗೆ 81

ವೀರೇಂದ್ರ ಸೆಹ್ವಾಗ್ ಬಿ ಗ್ರೇಮ್ ಸ್ವಾನ್  33

ರಾಹುಲ್ ದ್ರಾವಿಡ್ ಸಿ ಕುಕ್ ಬಿ ಗ್ರೇಮ್ ಸ್ವಾನ್  13

ವಿವಿಎಸ್ ಲಕ್ಷ್ಮಣ್ ಬ್ಯಾಟಿಂಗ್  08

ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್  13

ಇತರೆ: (ಬೈ-10, ಲೆಗ್‌ಬೈ-4)  14

ವಿಕೆಟ್ ಪತನ: 1-49 (ದ್ರಾವಿಡ್; 12.6), 2-64 (ಸೆಹ್ವಾಗ್; 18.1)

ಬೌಲಿಂಗ್: ಜೇಮ್ಸ ಆ್ಯಂಡರ್‌ಸನ್ 3-0-21-0, ಸ್ಟುವರ್ಟ್ ಬ್ರಾಡ್ 6-3-8-0, ಗ್ರೇಮ್ ಸ್ವಾನ್ 8-1-23-2, ಟಿಮ್ ಬ್ರೆಸ್ನನ್ 5-0-15-0 (ವಿವರ ಅಪೂರ್ಣ)ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಶತಕ ಗಳಿಸಿದವರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry