ಸೋಲ್: ದೂರಗಾಮಿ ರಾಕೆಟ್ ಉಡಾವಣೆ

7

ಸೋಲ್: ದೂರಗಾಮಿ ರಾಕೆಟ್ ಉಡಾವಣೆ

Published:
Updated:

ಸೋಲ್(ಎಎಫ್‌ಪಿ): ವಿಶ್ವಸಂಸ್ಥೆ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳ ವಿರೋಧದ ನಡುವೆಯೂ ಉತ್ತರ ಕೊರಿಯ ತನ್ನ ಮಹತ್ವಾಕಾಂಕ್ಷಿ ದೂರಗಾಮಿ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಮೂರು ಹಂತದ ಈ ರಾಕೆಟ್ ಅನ್ನು ಉಪಗ್ರಹದ ಕಕ್ಷೆಗೆ ಯಶಸ್ವಿಯಾಗಿ ಸೇರಿಸುವ ಮೂಲಕ ತನ್ನ ಗುರಿಗಳನ್ನು ಸಾಧಿಸಲಾಗಿದೆ ಎಂದು ಉತ್ತರ ಕೊರಿಯ ಹೇಳಿದೆ.ಈ ಕುರಿತು ಜಪಾನ್ ಮತ್ತು ಬ್ರಿಟನ್, `ರಾಕೆಟ್ ಉಡಾವಣೆಗಿಂತ ಜನರ ಕಲ್ಯಾಣಕ್ಕೆ ಉತ್ತರ ಕೊರಿಯ ಪ್ರಯತ್ನಿಸಬೇಕು' ಎಂದು ಅಭಿಪ್ರಾಯಪಟ್ಟಿವೆ. ಅಮೆರಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry