ಸೋಹಾ ಮದುವೆಯ ಮೀನಮೇಷ

7

ಸೋಹಾ ಮದುವೆಯ ಮೀನಮೇಷ

Published:
Updated:
ಸೋಹಾ ಮದುವೆಯ ಮೀನಮೇಷ

‘ಮದುವೆಯಾಗು, ಮದುವೆಯಾಗು, ಮದುವೆಯಾಗು ಅಂತ ಅಮ್ಮ ಹೇಳಿ ಹೇಳಿ ಸೋತು ಹೋಗಿದ್ದಾರೆ. ಈಗವರು ಏನಾದರೂ ಮಾಡಿಕೊ ಎಂಬ ಮನೋಭಾವ ತಾಳಿದ್ದಾರೆ. ಆದರೆ ಅಣ್ಣನಿಂದ ಹೇಳಿಸಲು ಆರಂಭಿಸಿದ್ದಾರೆ.’ ಹೀಗೆ ಸೋಹಾ ಅಲಿ ಖಾನ್‌ ಹೇಳುತ್ತಿದ್ದಾರೆ.ಕಳೆದ ಅಕ್ಟೋಬರ್‌ನಲ್ಲಿ ಅಣ್ಣ ಸೈಫ್‌ ಅಲಿ ಖಾನ್‌ ಮದುವೆಯಾಯಿತು. ಸೋಹಾ ಅವರದ್ದೂ ಬೇಗ ಆಗಲಿ ಎಂಬುದು ತಾಯಿ ಶರ್ಮಿಳಾ ಟ್ಯಾಗೋರ್‌ ಒತ್ತಾಯವಂತೆ.‘ನನ್ನಂತೆ ಮದುವೆಯಾಗಿದ್ದರೆ ಇಷ್ಟು ಹೊತ್ತಿಗೆ 20 ಮಕ್ಕಳ ತಾಯಿಯಾಗಿರುತ್ತಿದ್ದೆ ಸೋಹಾ... ಇನ್ನಾದರೂ ಮದುವೆಯಾಗು ಎಂದೆಲ್ಲ ಅಮ್ಮ ಗೋಗರೆಯುತ್ತಾರೆ. ಇದೀಗ  ಅಣ್ಣನಿಂದ ಹೇಳಿಸುವುದು ಅವರ ಹೊಸ ಅಸ್ತ್ರವಾಗಿದೆ. ಆದರೆ ಅಣ್ಣ ಮದುವೆಯಾಗಲು 40ನೇ ವರ್ಷ ಸೂಕ್ತ ಎಂದು ಅಭಿಪ್ರಾಯ ಪಡುತ್ತಾನೆ. ಅಮ್ಮನಿಗೂ ಅದನ್ನೇ ಹೇಳಿರುವೆ ಎಂದು ತಮ್ಮ ಬಳಿ ತಿಳಿಸಿದ್ದಾರೆ’ ಎನ್ನುತ್ತಾರೆ ಸೋಹಾ.ಇತ್ತೀಚೆಗಷ್ಟೆ ಕುನಾಲ್‌ ಖೇಮು ಜೊತೆಗೆ ಹೊಸ ಮನೆಗೆ ಪ್ರವೇಶಿಸಿರುವ ಸೋಹಾ ಅಲಿ ಖಾನ್‌ಗೆ ಈ ಬಾಂಧವ್ಯ ಸಂತೋಷ ತಂದಿದೆಯಂತೆ. ‘ಕುನಾಲ್‌ ಉತ್ತಮ ವ್ಯಕ್ತಿ. ಎಲ್ಲಕ್ಕಿಂತ ಮುಖ್ಯ ಎಂದರೆ ನಾನು ಒತ್ತಡದಲ್ಲಿದ್ದಾಗ ನನ್ನನ್ನು ನಗಿಸುವುದು ಗೊತ್ತು. ಅಳು ಬಂದಾಗ ಅವನ ದೃಢಬಾಹುಗಳ ಬೆಂಬಲ ದೊರೆಯುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಕುನಾಲ್‌ ಜೊತೆಗೆ ನಾನು ಖುಷಿಯಾಗಿದ್ದೇನೆ. ನನ್ನ ವೃತ್ತಿ ಸಂಬಂಧಿ ಒತ್ತಡಗಳನ್ನೂ ನಿಭಾಯಿಸುವ ಕಲೆ, ಛಾತಿ ಎರಡೂ ಅವನಿಗಿವೆ’ ಎಂದೆಲ್ಲ ಗುಣಗಾನ ಮಾಡುತ್ತಾರೆ.‘ಇದು ಮದುವೆಗೆ ಸೂಕ್ತವಾದ ಸಮಯ ಎನ್ನುವ ವಾದ ಅಮ್ಮನದು. ಆದರೆ ಮದುವೆಯೆನ್ನುವುದು ಒಂದು ಗಂಭೀರವಾದ ಬದ್ಧತೆ. ಅದರೊಂದಿಗೆ ಆಟವಾಡುವುದು ಅಸಾಧ್ಯ. ಒಬ್ಬ ವ್ಯಕ್ತಿ ತನ್ನ 40ನೇ ವಯಸ್ಸಿಗೆ ಮದುವೆಯ ಬಂಧನಕ್ಕೆ ಒಳಗಾಗುವಷ್ಟು, ಅದನ್ನು ಗೌರವಿಸುವಷ್ಟು ಪ್ರೌಢನಾಗಿರುತ್ತಾನೆ ಎಂದೆಲ್ಲ ಅಣ್ಣ ಹೇಳುತ್ತಾನೆ. ಇವೆರಡೂ ವಾದಗಳ ನಡುವಿನ ತೊಳಲಾಟ ನನ್ನದು’ ಎನ್ನುತ್ತಾರೆ ಸೋಹಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry