ಸೋಹ್ರಾಬುದ್ದೀನ್ ಪ್ರಕರಣ: ಕೋರ್ಟ್‌ಗೆ ಅಮಿತ್ ಷಾ ಹಾಜರು

7

ಸೋಹ್ರಾಬುದ್ದೀನ್ ಪ್ರಕರಣ: ಕೋರ್ಟ್‌ಗೆ ಅಮಿತ್ ಷಾ ಹಾಜರು

Published:
Updated:

ಮುಂಬೈ (ಪಿಟಿಐ): ಸೋಹ್ರಾಬುದ್ದೀನ್ ಷೇಕ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮಾಜಿ ಗೃಹ ಸಚಿವ, ನರೇಂದ್ರ ಮೋದಿ ಅವರ ಆಪ್ತ ಅಮಿತ್ ಷಾ ಮುಂಬೈ ಕೋರ್ಟ್‌ಗೆ ಶುಕ್ರವಾರ ಹಾಜರಾದರು.ಈ ಪ್ರಕರಣದ ಸಾಕ್ಷ್ಯಗಳಿಗೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಸಿಬಿಐ ತಿಳಿಸಿದ ನಂತರ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಲು ಸೆಪ್ಟೆಂಬರ್ 27ರಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ವಿಧಾನಸಭೆ ಚುನಾವಣೆಯಲ್ಲಿ ಅಮಿತ್ ಷಾ ಅಹಮದಾಬಾದ್‌ನ ನರನ್‌ಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry