ಭಾನುವಾರ, ಅಕ್ಟೋಬರ್ 20, 2019
27 °C

ಸೌಂದರ್ಯಕ್ಕಾಗಿ ಬೆಟ್ಟದ ನೆಲ್ಲಿಕಾಯಿ

Published:
Updated:

ಬೆಟ್ಟದ ನೆಲ್ಲಿಕಾಯಿಯ ಹಲವಾರು ಉಪಯೋಗಗಳು ಇಲ್ಲಿವೆ.

-ಬೆಟ್ಟದ ನೆಲ್ಲಿಕಾಯಿನ್ನು ಜಜ್ಜಿ ಪುಡಿ ಮಾಡಿ,ಅದಕ್ಕೆ ಅರಿಶಿಣ ಸೇರಿಸಿ ಕೈಕಾಲುಗಳಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಿ ಅನಗತ್ಯ ಕೂದಲ ಸಮಸ್ಯೆ ನಿವಾರಣೆ ಆಗುವುದು.-ಬೆಟ್ಟದ ನಲ್ಲಿಕಾಯಿ ಜ್ಯೂಸ್ ತಯಾರಿಸಿ ಸ್ನಾನದ ನೀರಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಬೆವರು ವಾಸನೆಗೆ ಕಡಿವಾಣ.-ಎರಡು ಚಮಚ ಅಂಟುವಾಳದ ಪುಡಿಗೆ ಎರಡು ಚಮಚ ಬೆಟ್ಟದ ನೆಲ್ಲಿಕಾಯಿ ಪುಡಿ ಹಾಕಿ ತಲೆಕೂದಲಿಗೆ ಹಚ್ಚಿ ತೊಳೆದು ನೋಡಿ ಕೂದಲು ಕಾಂತಿಯುತವಾಗುವುದು.-ಹೇನಿನ ಕಾಟ ಹೆಚ್ಚಾಗಿದ್ದರೆ ಬೆಟ್ಟದ ನೆಲ್ಲಿಕಾಯಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದಕ್ಕೆ ನಿಂಬೆರಸ ಸೇರಿಸಿ ಕೂದಲ ಬುಡಕ್ಕೆ ಹಚ್ಚಿ ಒಂದೆರೆಡು ತಾಸು ಬಿಟ್ಟು ತೊಳೆಯಿರಿ.-ಕಪ್ಪು ಕೂದಲಿಗಾಗಿ ಬೆಟ್ಟದ ನೆಲ್ಲಿಕಾಯಿಯನ್ನು ಒಣಗಿಸಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ ಇಟ್ಟುಕೊಳ್ಳಿ.ಆಲೂ ಸೌಂದರ್ಯ!


-ಹಸಿ ಆಲೂಗಡ್ಡೆ ತುರಿದು ರಸ ತೆಗೆದು ಮುಖದ ಮೇಲಿನ ಕಲೆ ಹಾಗೂ ಕಣ್ಣ ಸುತ್ತಲಿನ ಕಲೆ ಹೋಗಿಸಿಕೊಳ್ಳಿ.-ಹಸಿಹಾಲು ಹಾಗೂ ಆಲೂಗಡ್ಡೆರಸಕ್ಕೆ ಅರ್ಧಚಮಚ ಜೇನು ಸೇರಿಸಿ ಮುಖಕ್ಕೆ ಮಸಾಜ್ ಮಾಡಿಕೊಳ್ಳುತ್ತ ಬಂದರೆ ಸುಕ್ಕುಗಳು ಕಡಿಮೆ ಆಗುವುದು.-ಮೊಣಕೈ,ಮೊಣಕಾಲು ಕಪ್ಪಾಗಿದ್ದರೆ,ಆಲೂರಸಕ್ಕೆ ನಿಂಬೆರಸ ಸೇರಿಸಿ ಹಚ್ಚುತ್ತ ಬನ್ನಿ.

-ಟೊಮೆಟೋ ಹಣ್ಣಿನ ರಸಕ್ಕೆ,ಆಲೂರಸ ಸೇರಿಸಿ ಮುಖ ತೊಳೆಯುವುದರಿಂದ ಕಾಂತಿ ಹೆಚ್ಚುವುದು.

 

Post Comments (+)