ಸೌಂದರ‌್ಯೀಕರಣಕ್ಕೆ ಬಿಬಿಎಂಪಿಯಿಂದ 2 ಕೋಟಿ

7

ಸೌಂದರ‌್ಯೀಕರಣಕ್ಕೆ ಬಿಬಿಎಂಪಿಯಿಂದ 2 ಕೋಟಿ

Published:
Updated:

ಬೆಂಗಳೂರು: ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಮೊದಲ ಹಂತದ `ನಮ್ಮ ಮೆಟ್ರೊ~ ರೈಲು ಸಂಚಾರ ಉದ್ಘಾಟನೆ ಹಿನ್ನೆಲೆಯಲ್ಲಿ ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಆಸುಪಾಸಿನ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ರಸ್ತೆ ದುರಸ್ತಿ ಹಾಗೂ ಸೌಂದರ್ಯೀಕರಣಕ್ಕೆ ಬಿಬಿಎಂಪಿ 2 ಕೋಟಿ ರೂಪಾಯಿ ಖರ್ಚು ಮಾಡಿದೆ.

 ಬಿಬಿಎಂಪಿಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ, ಮೆಟ್ರೊ ಕಾಮಗಾರಿಯಿಂದ ಹಾಳಾಗಿರುವ ರಸ್ತೆಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮವೇ ದುರಸ್ತಿಪಡಿಸಬೇಕಾಗಿತ್ತು. ಆದರೆ, ಅದು ಮೆಟ್ರೊ ನಿಲ್ದಾಣಗಳ ಸುತ್ತಮುತ್ತ ಮಾತ್ರ ರಸ್ತೆ ದುರಸ್ತಿ ಮಾಡಿದೆ. `ನಮ್ಮ ವೆುಟ್ರೊ~ ಒಂದು ಐತಿಹಾಸಿಕ ಸಮಾರಂಭವಾಗಿರುವುದರಿಂದ ವಿಶೇಷ ಗಣ್ಯರು ಆಗಮಿಸಲಿರುವ ರಸ್ತೆ ಹಾಗೂ ವೃತ್ತಗಳನ್ನೂ ಪಾಲಿಕೆಯೇ ದುರಸ್ತಿ ಮಾಡಿದೆ ಎಂದು ಮೇಯರ್ ಪಿ. ಶಾರದಮ್ಮ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೆಬ್ಬಾಳ ಮೇಲ್ಸೇತುವೆಯಿಂದ ಹಿಡಿದು ಬೈಯಪ್ಪನಹಳ್ಳಿವರೆಗೆ ಮೊದಲ ಹಂತದ ಮೆಟ್ರೊ ಮಾರ್ಗ ಸಂಪರ್ಕಿಸುವ ಆಸುಪಾಸಿನ ಬಹುತೇಕ ಎಲ್ಲ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿರುವುದರ ಜತೆಗೆ, ಹಾಳಾದ ರಸ್ತೆಗಳಿಗೆ ಡಾಂಬರೀಕರಣ ಮಾಡಿ ದುರಸ್ತಿಗೊಳಿಸಲಾಗಿದೆ ಎಂದರು.

ಸುಮಾರು 46 ಕಿ.ಮೀ. ಉದ್ದದ ರಸ್ತೆಯನ್ನು ಸೌಂದರೀಕರಣಗೊಳಿಸಲಾಗಿದೆ. ಪೂರ್ವ ವಲಯದಲ್ಲಿ ಸುಮಾರು 100 ಸಣ್ಣ ಪುಟ್ಟ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಕಾಮಗಾರಿಗೆ 2 ಲಕ್ಷ ಮೀರದಂತೆ ಹಣ ಖರ್ಚು ಮಾಡಲಾಗಿದೆ ಎಂದು ಜಂಟಿ ಆಯುಕ್ತ ಶಿವಶಂಕರ್ ಮಾಹಿತಿ ನೀಡಿದರು.

`ನಮ್ಮ ವೆುಟ್ರೊ~ ಉದ್ಘಾಟನೆಗೊಳ್ಳಲಿರುವ ಮಾರ್ಗದ ಆಸುಪಾಸಿನ ಪ್ರಮುಖ ರಸ್ತೆ ಹಾಗೂ ವೃತ್ತಗಳ ಸೌಂದರ‌್ಯೀಕರಣಕ್ಕೆ ಕೆಲವು ಬಿಲ್ಡರ್‌ಗಳ ನೆರವು ಕೂಡ ಪಡೆಯಲಾಗಿದೆ. ಹಲವೆಡೆ ಅಲಂಕಾರಿಕ ಹೂಗಿಡಗನ್ನಿಟ್ಟು ನಗರಕ್ಕೆ ಹೊಸ ರೂಪ ನೀಡಲಾಗಿದೆ~ ಎಂದರು.

ಉಪ ಮೇಯರ್ ಎಸ್. ಹರೀಶ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಈ ಸಂದರ್ಭದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry