ಸೌಕರ್ಯಕ್ಕಾಗಿ ಎಸ್‌ಎಫ್‌ಐ ಪ್ರತಿಭಟನೆ

7

ಸೌಕರ್ಯಕ್ಕಾಗಿ ಎಸ್‌ಎಫ್‌ಐ ಪ್ರತಿಭಟನೆ

Published:
Updated:

ಭಾಲ್ಕಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಎಸ್‌ಎಫ್‌ಐನಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಪ್ರಮುಖ ಬೀದಿಗಳ ಮೂಲಕ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.ಡಾ. ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದ ಗುಂಪನ್ನು ಉದ್ದೇಶಿಸಿ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಮುಕೇಶ ಖೇಡಕರ್ ಮಾತನಾಡಿದರು. ಭಾಲ್ಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಿಸಲು ಕಾರಂಜಾ ಕಚೇರಿ ಆವರಣದಲ್ಲಿನ 3 ಎಕರೆ ಸ್ಥಳವನ್ನು ನೀಡಬೇಕು. ಪ್ರಸ್ತುತ ಹಳೆಯ ತಹಸೀಲ್ ಕಚೇರಿಯಲ್ಲಿ ನಡೆಯುತ್ತಿರುವ ವರ್ಗಗಳು ಆತಂಕ ಸೃಷ್ಟಿಸುತ್ತಿವೆ. ಕಟ್ಟಡದ ರಿಪೇರಿಯಾಗಬೇಕು ಎಂದರು.ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಸಮವಸ್ತ್ರ, ಕ್ರೀಡಾ ಸಾಮಗ್ರಿ, ಪೀಠೋಕರಣಗಳನ್ನು ಒದಗಿಸುವಂತೆ ಆಗ್ರಹಿಸಿದರು. ನಂತರ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಲಾಯಿತು. ಸಂಘಟನೆಯ ಜಂಟಿ ಕಾರ್ಯದರ್ಶಿ ವಿಷ್ಣು ಮಾನಕರಿ, ನಾಹಿದಾ ಬೇಗಂ, ಮಾಳಸಕಾಂತ ವಗ್ಗೆ, ಗಜಾನನ ಗಾದಗೆ, ಅಮರ ಧರ್ಮಣ್ಣ, ಜ್ಯೋತಿ, ಸಂಗೀತಾ, ಅಂಬಿಕಾ, ಸಾವಿತ್ರಿ, ಅರ್ಚನಾ ಪಾಟೀಲ ಮುಂತಾದವರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry