ಗುರುವಾರ , ಏಪ್ರಿಲ್ 22, 2021
29 °C

ಸೌಜನ್ಯಾ ಕೊಲೆ: ಎಸ್‌ಪಿ. ಗೋಯೆಲ್ ಸ್ಪಷ್ಟನೆ:ಸಿಬಿಐ ತನಿಖೆಗೆ ಅಭ್ಯಂತರವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಸೌಜನ್ಯಾ ಕೊಲೆ ತನಿಖೆಯನ್ನು ಪ್ರಾಮಾಣಿಕವಾಗಿಯೇ ನಡೆಸಿದ್ದೇವೆ. ತನಿಖೆ ಬಗ್ಗೆ ವಿಶ್ವಾಸ ಇಲ್ಲದಿದ್ದರೆ ಕುಟುಂಬಸ್ಥರು ಸಿಐಡಿ ಅಥವಾ ಸಿಬಿಐನಿಂದ ತನಿಖೆ ನಡೆಸಲು ಒತ್ತಾಯಿಸಬಹುದು. ಇದಕ್ಕೆ ನನ್ನ ಅಭ್ಯಂತರವಿಲ್ಲ~ ಎಂದು ಎಸ್‌ಪಿ. ಅಭಿಷೇಕ್ ಗೋಯೆಲ್ ಹೇಳಿದರು.ಬುಧವಾರ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಾಕಷ್ಟು ಸಾಕ್ಷ್ಯಗಳು ದೊರಕಿದ ಬಳಿಕವೇ ಆರೋಪಿ ಸಂತೋಷ್ ರಾವ್‌ನನ್ನು ಬಂಧಿಸಿದ್ದೇವೆ. ಆತನ ವಿಚಾರಣೆ ನಡೆಸುವಾಗ ಆಕೆಯ ಮಾವ ಕೂಡಾ ನಮ್ಮಂದಿಗೆ ಇದ್ದರು.ಪ್ರಕರಣ ಸಂಬಂಧ, ಆರೋಪಿ ಹಾಗೂ ಕೊಲೆಯಾದ ವ್ಯಕ್ತಿಯ ರಕ್ತದ ಮಾದರಿ, ಸ್ಥಳದಲ್ಲಿ ಸಿಕ್ಕಿದ್ದ ಬಟ್ಟೆ ಮತ್ತಿತರ ಕೆಲವು ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದೇವೆ. ಆ ವರದಿ ಬಾರದೇ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ~ ಎಂದರು.`ಪ್ರಕರಣದ ಬಗ್ಗೆ ಎಸ್‌ಎಂಎಸ್ ಮೂಲಕ ಕೆಲವರು ಸುಳ್ಳು ವದಂತಿ ಹಬ್ಬುತ್ತಿರುವ ಬಗ್ಗೆ ತಿಳಿದಿದೆ. ಈ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ~ ಎಂದರು.`ಕೊಲೆಯಲ್ಲಿ ಸಂತೋಷ್ ಆರೋಪಿಯಲ್ಲ ಎಂದು ವಾದಿಸುವವರೇ ಆತನನ್ನು ಬಂಧಿಸಿದ ದಿನ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು.ಅಂದು ನಾವು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದೆ ಇರುತ್ತಿದ್ದರೇ ಆರೋಪಿಯನ್ನು ಕೊಂದೇ ಹಾಕುತ್ತಿದ್ದರು. ಈ ಕೃತ್ಯದಲ್ಲಿ ಇತರರೂ ಭಾಗಿಯಾದ ಬಗ್ಗೆ ಯಾವುದೇ ಪುರಾವೆಗಳು ಲಭಿಸಿಲ್ಲ. ಯಾರಿಗಾದರೂ ಈ ಬಗ್ಗೆ ಸುಳಿವಿದ್ದರೆ ನಮಗೆ ಒದಗಿಸಬಹುದು~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.