ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಗೆ ಚಾಲನೆ

7

ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಗೆ ಚಾಲನೆ

Published:
Updated:

ಗೋಕಾಕ: ತಾಲ್ಲೂಕಿನ ಹಿರೇನಂದಿ ಗ್ರಾಮದ ಬಳಿ ನೂತನವಾಗಿ ಸ್ಥಾಪನೆಯಾಗಿರುವ ಶಾಸಕ ರಮೇಶ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯಲಕ್ಷ್ಮೀ  ಸಕ್ಕರೆ ಕಾರ್ಖಾನೆಗೆ ಶುಕ್ರವಾರ ಶಾಸಕ ರಮೇಶ ಜಾರಕಿಹೊಳಿ ದಂಪತಿಗಳು ಹಾಗೂ ಪ್ರಭಾ ಶುಗರ್ಸ್‌ ಅಧ್ಯಕ್ಷ ಲಖನ್ ಜಾರಕಿಹೊಳಿ ದಂಪತಿಗಳು ಪೂಜೆ ಸಲ್ಲಿಸುವುದರ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.ಕಾರ್ಖಾನೆಯ ಚೇರಮನ್ನರೂ ಆಗಿರುವ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ,  ಪ್ರಸಕ್ತ ಕಬ್ಬು ನುರಿಸುವ ಹಂಗಾಮಿಗೆ ಅಣಿಯಾಗಿರುವ ಈ ಸಕ್ಕರೆ ಕಾರ್ಖಾನೆಯು ಪ್ರತಿದಿನ 3,500 ಮೆ.ಟನ್ ಕಬ್ಬು ನುರಿಸುವ ಹಾಗೂ 18 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ತಾಲ್ಲೂಕಿನ ಕಬ್ಬು ಬೆಳೆಗಾರ ಕೃಷಿಕರ ಹಿತವನ್ನು ಮತ್ತು ತಾಲ್ಲೂಕಿನ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡುವ ದೃಷ್ಠಿಯಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ರೈತರು ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಕೆ ಮಾಡುವುದರ ಜೊತೆಗೆ ಕಾರ್ಖಾನೆಯ ಪ್ರಗತಿಗೆ ಸಹಕರಿಸಬೇಕು ಎಂದು ಕೋರಿದರು.ವೈ. ಮಂಜುನಾಥ, ಕಾರ್ಮಿಕ ಧುರೀಣ ಹಾಗೂ ಕಾರ್ಖಾನೆಯ ಆಡಳಿತ ಮಂಡಳಿ ನಿರ್ದೇಶಕರಾದ ಅಂಬಿರಾವ್ ಪಾಟೀಲ, ಶಂಕರ ಪವಾಡಿ, ಪ್ರಧಾನ ವ್ಯವಸ್ಥಾಪಕ ಅಧಿಕರಾವ್ ಪಾಟೀಲ, ಲಕ್ಷ್ಮಿ ನಾಯ್ಕ, ಸಂತೋಷ ಜಾರಕಿಹೊಳಿ, ಅಮರನಾಥ ಜಾರಕಿಹೊಳಿ, ಆದಿತ್ಯ ಜಾರಕಿಹೊಳಿ, ಅಶೋಕ ಸಾಯಣ್ಣವರ, ಪ್ರಭಾ ಶುಗರ್ಸ್‌ ಉಪಾಧ್ಯಕ್ಷ ಅಶೋಕ ಪಾಟೀಲ, ಜಿ.ಪಂ. ಮಾಜಿ ಉಪಾಧ್ಯಕ್ಷ ತುಕಾರಾಮ ಕಾಗಲ್, ಚಂದ್ರಶೇಖರ ಕೊಣ್ಣೂರ,ಮಡ್ಡೆಪ್ಪ ತೋಳಿನವರ, ಭೀಮಗೌಡ ಪೊಲೀಸ್‌ಗೌಡ, ರಾಜು ತಳವಾರ, ಶಿವಾನಂದ ಡೋಣಿ, ಜಾವೀದ ಮುಲ್ಲಾ, ಮಹಾದೇವ ಜಟ್ಟೆಪ್ಪನವರ, ನಗರಾಧ್ಯಕ್ಷೆ ಸಾವಿತ್ರಿ ಕಂಬಳಿ, ಎಸ್.ಎ.ಕೋತವಾಲ, ನಜೀರ್‌ಅಹ್ಮದ ಶೇಖ್, ರಾಮಣ್ಣಾ ಹುಕ್ಕೇರಿ, ಸುಧೀರ ಜೋಡಟ್ಟಿ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry