ಶುಕ್ರವಾರ, ಮೇ 14, 2021
31 °C

ಸೌಮಿತ್ರ ಸೇನ್ ರಾಜಿನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಮಿತ್ರ ಸೇನ್ ರಾಜಿನಾಮೆ

ಕೋಲ್ಕತ್ತ (ಐಎಎನ್‌ಎಸ್): ಕೋಲ್ಕತ್ತ ಹೈಕೋರ್ಟ್‌ನ ವಿವಾದಿತ ನ್ಯಾಯಮೂರ್ತಿ ಸೌಮಿತ್ರ ಸೇನ್ ಗುರುವಾರ ತಮ್ಮ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿದ್ದಾರೆ ಎಂದು ಅವರ ವಕೀಲ ಸುಭಾಷ್ ಭಟ್ಟಾಚಾರ್ಯ ತಿಳಿಸಿದ್ದಾರೆ.ಸೇನ್ ತಮ್ಮ ರಾಜಿನಾಮೆ ಪತ್ರವನ್ನು  ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಹಾಗೂ ಮತ್ತೊಂದು ಪತ್ರವನ್ನು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರಿಗೆ ಕಳುಹಿಸಿದ್ದಾರೆ ಎಂದರು.ದುರ್ವತನೆ ಮತ್ತು ಅವ್ಯವಹಾರ ಆರೋಪದ ಮೇಲೆ ಸೌಮಿತ್ತ ಸೇನ್ ಅವರು ಇತ್ತೀಚಿಗೆ ರಾಜ್ಯಸಭೆಯ ವಾಗ್ದಂಡನೆಗೆ ಗುರಿಯಾಗಿದ್ದರು. ಸೆ. 5ರಂದು ಲೋಕಸಭೆಯಲ್ಲಿ ಇವರು ವಾಗ್ದಂಡನೆ ಪ್ರಕ್ರಿಯೆಗೆ ಒಳಗಾಗಬೇಕಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.