ಶುಕ್ರವಾರ, ಏಪ್ರಿಲ್ 23, 2021
28 °C

ಸೌಲಭ್ಯಕ್ಕಾಗಿ ಹಾತೊರೆಯುತ್ತಿರುವ ಕಸಾಪುರ ಗ್ರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ತಾಲ್ಲೂಕಿನಲ್ಲಿ ಹಲವಾರು ಸೌಲಭ್ಯವಂಚಿತ ಗ್ರಾಮಗಳಿದ್ದು ಅವುಗಳಲ್ಲಿ ತಾಲ್ಲೂಕಿನ ಗುಡೇಕೋಟೆ ಗ್ರಾ.ಪಂ ವ್ಯಾಪ್ತಿಯ ಕಸಾಪುರ ಗ್ರಾಮವೂ ಒಂದಾಗಿದೆ. ಅಂದಾಜು 750 ಜನಸಂಖ್ಯೆಯಿರುವ ಗ್ರಾಮದಲ್ಲಿ ಮುಖ್ಯವಾಗಿ ನೀರಿನ ಕೊರತೆಯಿದೆ.ತಾಲ್ಲೂಕು ಕೇಂದ್ರದಿಂದ 35 ಕಿ.ಮೀ ದೂರವಿರುವ ಕಸಾಪುರ ಗ್ರಾಮ ಮುಖ್ಯ ರಸ್ತೆಯಿಂದ ಒಳಮಾರ್ಗದಲ್ಲಿದೆ. ಗುಡೇಕೋಟೆಯಿಂದ 5 ಕಿ.ಮೀ ದೂರವಿರುವ ಗ್ರಾಮಕ್ಕೆ ಕೇವಲ ಒಂದು ಬಸ್ ಮಾತ್ರ ಸಂಚರಿಸುತ್ತದೆ. ವಿದ್ಯುತ್ ಇದ್ದರೆ ಮಾತ್ರ ನೀರು ಇಲ್ಲದಿದ್ದರೆ ಇಲ್ಲ ಎಂಬುದು ಗ್ರಾಮಸ್ಥರ ಅಳಲು.ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತ ತೀವ್ರವಾಗಿರುವುದರಿಂದಾಗಿ ನೀರಿನ ಕೊರತೆಯಿದೆ. ನೀರಿನ ಸಮಸ್ಯೆಯಿಂದಾಗಿ ಹಳ್ಳಕ್ಕೆ ಹೋಗಿ ಇರುವ ಸ್ವಲ್ಪ ನೀರನ್ನೇ ತರಬೇಕಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮದಲ್ಲಿ ಜಾನುವಾರುಗಳು ನೀರು ಕುಡಿಯಲು ನೀರಿನ ತೊಟ್ಟಿಯೇ ಇಲ್ಲ. ಇರುವ ತೊಟ್ಟಿಯೂ ಒಡೆದು ಹೋಗಿ ಹಲವಾರು ವರ್ಷಗಳೇ ಕಳೆದಿವೆ. ಹೀಗಾಗಿ ಗ್ರಾಮಸ್ಥರು ಜಾನುವಾರುಗಳಿಗೆ ನೀರನ್ನು ಕುಡಿಸುವುದೇ ಸಮಸ್ಯೆಯಾಗಿದೆ ಎನ್ನುತ್ತಾರೆ.ಗ್ರಾಮದಲ್ಲಿ ಚರಂಡಿಗಳನ್ನು ನಿರ್ಮಿಸಲಾಗಿದೆಯಾದರೂ ಕಸ, ಕೊಳಚೆಯಿಂದಾಗಿ ಅವು ಸೊಳ್ಳೆಗಳ ಆವಾಸಸ್ಥಾನವಾಗಿವೆ. 6ನೇ ತರಗತಿಯವರೆಗೆ ಶಾಲೆಯಿದ್ದು, ಪ್ರೌಢಶಾಲೆಗೆ ಮಕ್ಕಳು ಗುಡೇಕೋಟೆಗೆ ಹೋಗುತ್ತಾರೆ. ಇರುವ ಒಂದು ಬಸ್ ಹೊರತುಪಡಿಸಿದರೆ ಗ್ರಾಮಸ್ಥರು ಬಹುತೇಕವಾಗಿ ಗುಡೇಕೋಟೆಗೆ ನಡೆದೇ ಹೋಗುತ್ತಾರೆ.ಇಲಾಖೆಯ ಅಧಿಕಾರಿಗಳಾರೂ ಗ್ರಾಮಕ್ಕೆ ಭೇಟಿ ನೀಡುವುದ್ಲ್ಲಿಲ. ತಮ್ಮ ಗ್ರಾಮವನ್ನು ನಿರ್ಲಕ್ಷಿಸಲಾಗಿದೆ ಎಂದು ಗ್ರಾಮಸ್ಥರ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.`ಮಳೆ ಇಲ್ಲ, ಬೆಳೆಯೂ ಇಲ್ಲ, ಸಾಲ ಇದೆ. ತೀರಿಸುವುದೇ ಸಮಸ್ಯೆಯಾಗಿದೆ~ ಎಂದು ಗಾಮದ ಬೊಮ್ಮಣ್ಣ ಹೇಳುತ್ತಾರೆ.`ನಮ್ಮೂರಿಗೆ ಯಾರೂ ಬರಂಗಿಲ್ಲ, ನಮ್ಮನ್ನ ಕೇಳೋರೂ ಇಲ್ಲ~ ಎಂದು ಗ್ರಾಮದ ಅಯ್ಯಣ್ಣ ದೂರುತ್ತಾರೆ. `ನೀರಿನ ಸಲುವಾಗಾದ್ರೂ ಕರೆಂಟ್ ಕೊಡಂಗ ಮಾಡ್ರಿ, ಇಲ್ಲಂದ್ರ ದೂರದ ಹಳ್ಳಕ್ಕೆ ಹೋಗಿ ನೀರು ತರಬೇಕಾಗ್ತದ~ ಎಂದು ಗ್ರಾಮ ಗಂಗಪ್ಪ, ಶಿವಣ್ಣ, ನಾಗಣ್ಣ ಹೇಳುತ್ತಾರೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗ್ರಾಮದ ಸಮಸ್ಯೆಗಳತ್ತ ಗಮನ ಹರಿಸಬೇಕಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.