ಸೌಲಭ್ಯಕ್ಕೆ ಆಗ್ರಹಿಸಿ ಮುತ್ತಿಗೆ

7

ಸೌಲಭ್ಯಕ್ಕೆ ಆಗ್ರಹಿಸಿ ಮುತ್ತಿಗೆ

Published:
Updated:

ಚಿಂತಾಮಣಿ: ತಾಲ್ಲೂಕಿನ ಆನೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮೂಡ ಚಿಂತಲಹಳ್ಳಿ  ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂಲಸೌಲಭ್ಯ ಒದಗಿಸುವಂತೆ ಒತ್ತಾಯಿಸಿ  ತಾಲ್ಲೂಕು ಮಾದಿಗ ದಂಡೋರ  ಸಮಿತಿ ಮುಖಂಡರು  ಗುರುವಾರ ಗ್ರಾಮ ಪಂಚಾಯ್ತಿ ಕಚೇರಿಗೆ ಮುತ್ತಿಗೆ  ಹಾಕಿ ಪ್ರತಿಭಟನೆ ನಡೆಸಿದರು.ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ  ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಗಳ  ಕಾಲೊನಿಗಳ ಪಕ್ಕ  ಪೂದೆಗಳಿರುವುದರಿಂದ  ಸೊಳ್ಳೆಗಳ ಕಾಟ ಹೆಚ್ಚಾಗಿ ಮಾರಣಾಂತಿಕ ಕಾಯಿಲೆಗಳಲ್ಲಿ ಜನ ಒದ್ದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಸಿ.ವಸಂತಕುಮಾರ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಪ್ರತಿಭಟನಾಕಾರ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಅಗತ್ಯಕ್ರಮ ಕೈಗೊಳ್ಳುವಂತೆ  ಪಂಚಾಯತಿ ಪಿ.ಡಿ.ಒ ನಾಗೇಶಬಾಬು ಮತ್ತು ಅಧ್ಯಕ್ಷ ಕೃಷ್ಣಪ್ಪನವರಿಗೆ ಸೂಚಿಸಿದರು.ಕೂಡಲೇ ಕ್ರಮಕೈಗೊಳ್ಳಬೇಕು. ದಲಿತ ಕಾಲೊನಿಗಳಲ್ಲಿ ಚರಂಡಿ, ವಿದ್ಯುತ್ ದೀಪ, ಶೌಚಾಲಯ ಸರಿಪಡಿಸುವುದು ಸೇರಿದಂತೆ 10 ಬೇಡಿಕೆಗಳ ಮನವಿ ಪತ್ರ  ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡಿದರು.ಸಂಘಟನೆಯ ಜೆ.ಎಂ.ದೇವರಾಜ್, ಎಂ.ವಿ.ರಾಮಾಪ್ಪ, ಗುರು ಪ್ರಸಾದ್. ಆನೂರು ಶ್ರೀನಿವಾಸ, ಕೆ.ಎಂ.ನರಸಿಂಹಪ್ಪ,  ನಾನೆಪ್ಪ, ನಾರಾಯಣಸ್ವಾಮಿ, ಮಾಡಿಕೆರೆ ನಾರಾಯಣಸ್ವಾಮಿ ನಲ್ಲಪ್ಪ, ಆಂಜಪ್ಪ, ನಾಗರತ್ನಮ್ಮ, ಗಂಗಮ್ಮ, ನಾರಾಯಣಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry