ಭಾನುವಾರ, ಮೇ 16, 2021
27 °C

ಸೌಲಭ್ಯಗಳಿಲ್ಲದ ರಾಷ್ಟ್ರೀಯ ಉದ್ಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಬಂಡೀಪುರ  ರಾಷ್ಟ್ರೀಯ ಉದ್ಯಾನವನಕ್ಕೆ ಈ ಬೇಸಿಗೆಯಲ್ಲಿ ಪ್ರವಾಸಿಗರ ದಂಡು ಹೆಚ್ಚಿದೆ.

ಬಂಡೀಪುರ ಅಭಯಾರಣ್ಯದಲ್ಲಿ ಕಾಡಿನ ಮಧ್ಯ ಭಾಗಕ್ಕೆ ಹೋಗುವ ಸಫಾರಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.ಸಫಾರಿಗೆ ಹೋದರೆ  ಅಲ್ಲಿ ಕಾಡಾನೆಗಳು, ಜಿಂಕೆ, ಸಾರಂಗ, ವಿವಿಧ ವರ್ಗಕ್ಕೆ ಸೇರಿದ ಪಕ್ಷಿಗಳು, ಕಾಡೆಮ್ಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಕೆಲವು ವೇಳೆ ಪ್ರಾಣಿಗಳ ದರ್ಶನವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ದುಬಾರಿ ಶುಲ್ಕ ನೀಡಿ ಸಫಾರಿಗೆ ಬಂದ ಪ್ರವಾಸಿಗರಿಗೆ ಬೇಸರವಾಗುತ್ತದೆ. ಈ ಉದ್ಯಾನವನದಲ್ಲಿ ಪ್ರಾಣಿ ಸಂಗ್ರಹಾಲಯವಿದೆ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ವೀಕ್ಷಿಸುತ್ತಾರೆ.ಇಲ್ಲಿ ಸಾಕಾನೆ ಶಿಬಿರವು ಇದೆ. ಪ್ರವಾಸಿಗರು ಇಲ್ಲಿ ಸಾಕಾನೆಗಳ ಮೇಲೆಯೂ ಸವಾರಿ ಮಾಡಬಹುದು. ಪೋಷಕರು ಮಕ್ಕಳೊಂದಿಗೆ ಆಗಮಿಸಿ ಅರಣ್ಯದ ಸೊಬಗು ವೀಕ್ಷಿಸಿ ವನ್ಯಮೃಗ ಕಾಣಬಹುದು. ಬಂಡೀಪುರದಲ್ಲಿ ಸೂಕ್ತ ಹೊಟೇಲ್ ವ್ಯವಸ್ಥೆ ಇಲ್ಲ ಎನ್ನುವುದು ಬಹುತೇಕ ಪ್ರವಾಸಿಗರ ದೂರಾಗಿದೆ. ಇಲ್ಲಿಗೆ ಬರಬೇಕಾದರೆ ಆಹಾರವನ್ನು ನಾವೇ ತರಬೇಕು. ಸಮರ್ಪಕವಾಗಿ ದೊರೆಯುದೇ ಇರುವುದರಿಂದ   ಅನೇಕ ವೇಳೆ ತೊಂದರೆಯಾಗಿದೆ. ಒಂದು ಹೊಟೇಲ್ ತೆರೆದರೆ ಅನುಕೂಲವಾಗುತ್ತದೆ.ಸೂಕ್ಷ್ಮ ಪರಿಸರ ವಲಯ ಎಂದು ಘೋಷಣೆಯಾದರೆ ಬಂಡೀಪುರ ಸಮೀಪವಿರುವ ಮಂಗಲ, ಯಲಚಟ್ಟಿ ಮುಂತಾದ ಗ್ರಾಮಗಳಿಗೆ ಓಡಾಡಲು ಸಾರ್ವಜನಿಕರಿಗೆ ತೊಂದರೆಯಗುತ್ತದೆ. ಈ ಕಾರಣಕ್ಕಾಗಿ ಪ್ರವಾಸೋಧ್ಯಮ ಇಲಾಖೆ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಬಿಡುವುದಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.ಪ್ರತಿ ವರ್ಷ ಪ್ರವಾಸಿಗರ ಭೇಟಿ ಬೇಸಿಗೆಯಲ್ಲಿ ಹೆಚ್ಚಾಗಿರುತ್ತದೆ. ಆದರೆ, ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಒದಗಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.