ಗುರುವಾರ , ಜೂನ್ 24, 2021
21 °C

ಸೌಲಭ್ಯಗಳು ತಲುಪುವಂತೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರತಿ ವಾರ್ಡ್ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ಸೌಲಭ್ಯಗಳು ಅವರಿಗೆ ಸರಿಯಾಗಿ ತಲುಪುವಂತೆ ಮಾಡಬೇಕು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರಿಗೆ ಕರೆ ನೀಡಿದರು.ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕ ನಗರದಲ್ಲಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, `ಅಧಿಕಾರ ಇರಲಿ, ಇಲ್ಲದಿರಲಿ, ಜನಸಾಮಾನ್ಯರ ಸಮಸ್ಯೆಗಳ ಕುರಿತು ಸರ್ಕಾರದ ಗಮನಸೆಳೆಯುವ ಕೆಲಸ ನೀವು ಮಾಡುತ್ತಿ        ರಬೇಕು~ ಎಂದು ಹೇಳಿದರು.ಕೇರಳದ ಯುವಕನೊಬ್ಬನನ್ನು ಪ್ರೀತಿಸಿದ ಚಾಮರಾಜನಗರದ ಹುಡುಗಿಯೊಬ್ಬಳ ಉದಾಹರಣೆ ನೀಡಿದ ಕರಂದ್ಲಾಜೆ ಅವರು, `ಆ ಹುಡುಗಿ ತಾನು ಪ್ರೀತಿಸಿದ ಹುಡುಗನ ಜೊತೆ ಕೇರಳದ ಮಲಪ್ಪುರಕ್ಕೆ ಓಡಿಹೋಗಿದ್ದಳು. ಬೆಂಗಳೂರಿನಿಂದ ಕಣ್ಮರೆಯಾದ ಅಂದಾಜು 400 ಹೆಣ್ಣುಮಕ್ಕಳು ಆ ಪ್ರದೇಶದಲ್ಲಿರುವುದಾಗಿ ಆಕೆ ತಿಳಿಸಿದ್ದಾಳೆ. ಹೈದರಾಬಾದ್‌ನ ಅಮಾಯಕ ಹೆಣ್ಣುಮಕ್ಕಳನ್ನು ಕೊಲ್ಲಿ ದೇಶಗಳ ಶ್ರೀಮಂತರಿಗೆ ಮಾರಾಟ ಮಾಡುವ ದೊಡ್ಡ ಜಾಲವೇ ಇದೆ. ಇಂತಹ ಗಂಭೀರ ಸಮಸ್ಯೆಗಳ ವಿರುದ್ಧ ಮೋರ್ಚಾದ ಸದಸ್ಯರು ಹೋರಾಟ ನಡೆಸಬೇಕು~ ಎಂದು ಹೇಳಿದರು.ಬಿಬಿಎಂಪಿ ಮೇಯರ್ ಪಿ.ಶಾರದಮ್ಮ, ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ರೀನಾ ಪ್ರಕಾಶ್    ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು., ಬೆಂಗಳೂರು ನಗರ ಅಧ್ಯಕ್ಷೆ ಮಮತಾ ಉದಯ್, ರಾಜ್ಯ ಕಾರ್ಯದರ್ಶಿಗಳಾದ ಗೀತಾ ಧನಂಜಯ, ಹೇಮಲತಾ ಸತೀಶ್, ಸವಿತಾ ಜೈನ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.