ಸೌಲಭ್ಯ ಬಳಸಿ ಪ್ರಗತಿ ಸಾಧಿಸಿ

7

ಸೌಲಭ್ಯ ಬಳಸಿ ಪ್ರಗತಿ ಸಾಧಿಸಿ

Published:
Updated:

ಚನ್ನಪಟ್ಟಣ: ಸರ್ಕಾರವು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಬಳಸಿಕೊಂಡು ಶೈಕ್ಷಣಿಕ ಪ್ರಗತಿ ಹೊಂದುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು.



ಮಂಗಳವಾರ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಮೀನಾ ಕಾರ್ಯಕ್ರಮಕ್ಕೆ  ಚಾಲನೆ ನೀಡಿದ ಅವರು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಸಿಎಎಲ್‌ಸಿ ವತಿಯಿಂದ ಕಂಪ್ಯೂಟರ್‌ಗಳನ್ನು ನೀಡಲಾಗುವುದು ಎಂದರು.



ಶಾಲೆಯ ಮುಖ್ಯಶಿಕ್ಷಕ ವಸಂತ್ ಕುಮಾರ್ ಮಾತನಾಡಿ, ಎನ್‌ಪಿಇಜಿಇಎಲ್ ಕಾರ್ಯಕ್ರಮಗಳಾದ ವೃತ್ತಿಕೌಶಲ, ಯೋಗ ತರಬೇತಿ, ಸಂಗೀತ, ಹೊಲಿಗೆ ತರಬೇತಿಗಳು ಕ್ಲಸ್ಟರ್ ವ್ಯಾಪ್ತಿಯಲ್ಲಿ ಉತ್ತಮವಾಗಿ ನಡೆಯುತ್ತಿವೆ. ಎಲ್‌ಪಿಇಜಿಇಎಲ್‌ನಲ್ಲಿ ಉತ್ತಮ ಸಾಧನೆ ತೋರುವ ಶಾಲೆಗೆ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ಎಂದರು.



ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಮಂಗಳವಾ ಪೇಟೆ ಶಾಲೆಯ ಎನ್‌ಪಿಇಜಿಇಎಲ್ ಕೇಂದ್ರದ ಅಧ್ಯಕ್ಷ ಬಿ.ಕೆ.ಅಂಕೇಗೌಡ, ಬೈರಾಪಟ್ಟಣ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶ್, ಸದಸ್ಯರಾದ ಭಾಗ್ಯಲಕ್ಷ್ಮಿ, ನೇತ್ರಾವತಿ ಹಾಜರಿದ್ದರು.



ಮುಖ್ಯ ಶಿಕ್ಷಕಿ ಕೆ.ಲಲಿತಮ್ಮ ಸ್ವಾಗತಿಸಿದರು. ಶಿಕ್ಷಕಿ ರಂಗಮಣಿ ನಿರೂಪಿಸಿದರು. ಸಹಶಿಕ್ಷಕ ವೆಂಕಟಸ್ವಾಮಿ ವಂದಿಸಿದರು. ಇದೇ ವೇಳೆ ಮೀನಾ ತಂಡದಿಂದ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಜಾಗೃತಿ ಗೀತೆ, ಅನಕ್ಷರತೆಯಿಂದ ಉಂಟಾಗುವ ಸಮಸ್ಯೆಗಳ ಕುರಿತಂತೆ ನಾಟಕ ಪ್ರದರ್ಶನ ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry