ಸೌಲಭ್ಯ ವಂಚಿತ ಪಗಡದಿನ್ನಿ ಗ್ರಾಮ!

7
ಗ್ರಾಮಾಯಣ

ಸೌಲಭ್ಯ ವಂಚಿತ ಪಗಡದಿನ್ನಿ ಗ್ರಾಮ!

Published:
Updated:

ಸಿಂಧನೂರು: ತಾಲ್ಲೂಕಿನ ಪಗಡದಿನ್ನಿ ಗ್ರಾಮ 2500 ಜನಸಂಖ್ಯೆ ಇರುವ ದೊಡ್ಡ ಗ್ರಾಮ. ಇಲ್ಲಿ ಸರ್ಕಾರಿ ಪ್ರೌಢಶಾಲೆ, ಅಂಚೆ ಕಚೇರಿ, ಗ್ರಾಮ ಪಂಚಾಯಿತಿ, ನಾಲ್ಕು ಅಂಗನವಾಡಿ ಕೇಂದ್ರ, ಕಿರಿಯ ಆರೋಗ್ಯ ಸಹಾಯಕರಿಗೆ ಆಸ್ಪತ್ರೆ ಮತ್ತು ವಸತಿ ಕಟ್ಟಡಗಳು ಇವೆ. ಆದರೆ, ಇಲ್ಲಿನ ಗ್ರಾಮ ಪಂಚಾಯಿತಿಗೆ ಕಳೆದ 4 ತಿಂಗಳಿನಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೇ ಇಲ್ಲ. ಪರಿಣಾಮ ಗ್ರಾಮದ ಚರಂಡಿಗಳು ಗಬ್ಬು ನಾರುತ್ತಿವೆ. ವರ್ಷದಲ್ಲಿ ಒಂದು ಬಾರಿಯೂ ಚರಂಡಿ ಸ್ವಚ್ಛ ಮಾಡುತ್ತಿಲ್ಲ. ರೋಗ ರುಜಿನೆಗಳು ಬರಲಾರಂಭಿಸಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಳ್ಳದ ನೀರನ್ನು ಶುದ್ಧೀಕರಣ ಮಾಡದೇ ಗ್ರಾಮದ ಎಲ್ಲರ ಮನೆಗೆ ಪೂರೈಸಲಾಗುತ್ತಿದೆ. ಪಂಚಾಯಿತಿ, ಶಾಲೆ, ಅಂಗನವಾಡಿ ಎಲ್ಲ ಕಡೆಗಳಲ್ಲಿ ತಿಪ್ಪೆಗಳೇ ಕಾಣುತ್ತವೆ. ಕೆಲ ಮನೆಗಳ ಸುತ್ತಲೂ ತಿಪ್ಪೆ, ಮಲೀನಗೊಂಡ ನೀರು ಇರುವುದರಿಂದ ಸೊಳ್ಳೆ ಕಾಟ ಹೆಚ್ಚಿದೆ. ಗ್ರಾಮದಲ್ಲಿ ಹತ್ತಾರು ಜನರು ಜ್ವರದಿಂದ ನರಳುತ್ತಿದ್ದಾರೆ. ಸಿಂಧನೂರು ಖಾಸಗಿ ಆಸ್ಪತ್ರೆಗಳಲ್ಲಿ ಹಲವರು ಚಿಕಿತ್ಸೆ ಪಡೆಯುತ್ತ್ದ್ದಿದಾರೆ.  ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೇಲವರು ಮನೆಯತ್ತ ಮರಳುತ್ತಿದ್ದಾರೆ.ಆರೋಗ್ಯ ಸಹಾಯಕಿಯರ ಉಪಕೇಂದ್ರವಿದ್ದು, ಗ್ರಾಮದಲ್ಲಿ ಸಣ್ಣಪುಟ್ಟ ರೋಗ-ರುಜಿನಗಳಿಗೆ ಚಿಕಿತ್ಸೆ ನೀಡುವುದು ಮತ್ತು ಹೆಚ್ಚಿನ ಚಿಕಿತ್ಸೆಗೆ ತಾಲ್ಲೂಕು ಕೇಂದ್ರಕ್ಕೆ ಕಳುಹಿಸಿಕೊಡುವ ಕರ್ತವ್ಯ ಮಾಡಿದರೆ ಡೆಂಗೆ ಜ್ವರ ಬರುತ್ತಿರಲಿಲ್ಲ ಎಂದು  ಹನುಮಂತ ಕೋಳಬಾಳ, ಅಯ್ಯಪ್ಪ ಬಡಕ್ಲರ್, ಶರಣಬಸವ ಛಲವಾದಿ ಹೇಳುತ್ತಾರೆ.ಕಲುಷಿತ ನೀರು ಪೂರೈಸುವ, ಚರಂಡಿ ಸ್ವಚ್ಛಗೊಳಿಸದಿರುವ ಬಗ್ಗೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್‌ಗೆ ಹೇಳಿದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಅಭಿವೃದ್ಧಿ ಅಧಿಕಾರಿಗಳನ್ನು ಕಳುಹಿಸದೆ ಅನ್ಯಾಯ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.ನಿರುಪಯುಕ್ತ ಸೋಲಾರ್: ರಸ್ತೆ ಬೀದಿಯಲ್ಲಿ ಸೌರದೀಪ ಹಾಕಿದ್ದಾರೆ. ಒಂದು ದಿನವೂ ಬೆಳಕು ಕಂಡಿಲ್ಲ. ಅದೆಷ್ಟು ಹಣ ಖರ್ಚು ಮಾಡಿದ್ದಾರೋ ದೇವರೇ ಬಲ್ಲ ಎಂದು ಹುಸೇನಪ್ಪ ಬೆಳ್ಳೊಳ್ಳಿ ಆಕ್ರೋಶ ಬರಿತರಾಗಿ ಹೇಳುತ್ತಾರೆ. ಸುವರ್ಣ ಗ್ರಾಮ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಓಣಿಯಲ್ಲಿ ಸಿ.ಸಿ.ರಸ್ತೆಯನ್ನು ಅರೆ-ಬರೆ ಮಾಡಿ ಹಣ ಎತ್ತಿಕೊಂಡು ಪರಾರಿಯಾಗಿದ್ದಾರೆಂದು ಈರಪ್ಪ ಆಪಾದಿಸಿದರು.ಪಗಡದಿನ್ನಿ ಗ್ರಾಮ ಪಂಚಾಯಿತಿಯಲ್ಲಿ 17ಜನರ ಸದಸ್ಯರಿದ್ದು, ಪಗಡದಿನ್ನಿ ಗ್ರಾಮದವರೇ 4ಜನ ಸದಸ್ಯರಿದ್ದಾರೆ. ಪಕ್ಕದ ಮುಳ್ಳೂರು ಗ್ರಾಮದ ಹೇಮಮ್ಮ ದೇವಪ್ಪ ಅಧ್ಯಕ್ಷರಾಗಿದ್ದಾರೆ. ಇಲ್ಲಿಯವರೆಗೆ ಫಾಗಿಂಗ್ ಯಂತ್ರ ಇರಲಿಲ್ಲ. ಹೈದರಾಬಾದ್‌ನಿಂದ ತೆಗೆದುಕೊಂಡು ಬಂದಿದ್ದು ಒಂದು ಬಾರಿ ಸಿಂಪಡಿಸಿರುವುದಾಗಿ ಹೇಮಮ್ಮ ಹೇಳುತ್ತಾರೆ.ರಸ್ತೆಯ ಇಕ್ಕೆಲಗಳಲ್ಲಿ ತಿಪ್ಪೆ ಹಾಕುವುದು ಸಾಮಾನ್ಯ. ಜಾಗದ ಅಭಾವವಿರುವುದರಿಂದ ರಸ್ತೆಯ ಪಕ್ಕದಲ್ಲಿ ಬಹಿರ್ದೆಸೆ ಮಾಡುತ್ತಾರೆ ಎನ್ನುತ್ತಾರೆ ಅವರು.ಬಾರದ ನೌಕರರು: ಗ್ರಾಮಲೆಕ್ಕಾಧಿಕಾರಿ, ಗ್ರಾಮ ಸೇವಕ ಸೇರಿದಂತೆ ನೌಕರರು ಮತ್ತು ಅಧಿಕಾರಿಗಳು ಪಗಡದಿನ್ನಿ ಗ್ರಾಮಕ್ಕೆ ಬರುವುದಿಲ್ಲ. ಆರು ತಿಂಗಳಿಗೊಮ್ಮೆ ಕಂದಾಯ ವಸೂಲಿಗೆ ಗ್ರಾಮಲೆಕ್ಕಿಗರು ಬರುತ್ತಾರೆ.ಔಷಧ ಪೂರೈಕೆ ಮಾಡಿ: ಮುದಗಲ್ ಸಣ್ಣ    ಹನುಮಂತ, ಈಶಪ್ಪ, ಮಾರೆಮ್ಮ, ಈರಪ್ಪ      ಹರಿಜನ, ಈಳಿಗೇರ ಅನಿಲ ಬಸವರಾಜ, ಬಸಮ್ಮ ಚನ್ನಬಸವ, ಲಕ್ಷ್ಮಣ ನಾಗಪ್ಪ ಬೇರ‌್ಗಿ  ಜ್ವರದಿಂದ ಬಳಲುತ್ತ್ದ್ದಿದಾರೆ. ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕೆಂದು ತಾಲ್ಲೂಕು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ವಿಜ್ಞಾನ ಶಿಕ್ಷಕರಿಲ್ಲ. ಶಾಸಕ ಬಾದರ್ಲಿ ಹಂಪನಗೌಡರು ತಮ್ಮ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಬೇಕೆನ್ನುವುದೇ ಗ್ರಾಮಸ್ಥರ ಆಶಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry