ಸೌಲಭ್ಯ ವಂಚಿತ ಸರ್ಕಾರಿ ಆಸ್ಪತ್ರೆ

7

ಸೌಲಭ್ಯ ವಂಚಿತ ಸರ್ಕಾರಿ ಆಸ್ಪತ್ರೆ

Published:
Updated:

ನರಗುಂದ: ಸರಿಯಾದ  ರಸ್ತೆ ಇಲ್ಲ, ಬೀದಿ ದೀಪಗಳು ಇಲ್ಲ. ನೆಲ ಹಾಸುಗಳು  ಕುಸಿಯುವ ಮೂಲಕ ಸರಕಾರಿ ಆಸ್ಪತ್ರೆಗಳು ಹೀಗೂ ಇರುತ್ತವೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ತಾಲ್ಲೂಕಿನ ಜಗಾಪುರದ ಸರಕಾರಿ ಪ್ರಾಥಮಿಕಆರೋಗ್ಯ ಕೇಂದ್ರದ ಸ್ಥಿತಿ. ಇಲ್ಲಿ ಹೆರಿಗೆಗೆ ಮಹಿಳೆಯರನ್ನು  ಟ್ರ್ಯಾಕ್ಟರ್‌ನಲ್ಲಿ ಇಲ್ಲವೇ ಚಕ್ಕಡಿಯಲ್ಲಿ ಕರೆ ತರಬೇಕು ! ಇದನ್ನು ನೋಡಿದರೆ ಈ ಆಸ್ಪತ್ರೆಗೆ ಆ ಮಹಿಳೆ ಬರುತ್ತಲೆ ದಾರಿಯಲ್ಲಿ  ಹೆರಿಗೆ ಆಗಿಯೋ ಅಥವಾ ಇನ್ನಾವುದೋ ಅನಾಹುತ ಸಂಭವಿಸುವ ದಯನೀಯ ಸ್ಥಿತಿ ಇಲ್ಲಿದೆ.ಬಹುತೇಕ ಸುತ್ತಲಿನ ನಾಲ್ಕೈದು ಹಳ್ಳಿಗಳಿಗೆ ಇರುವುದು ಒಂದೇ ಸರಕಾರಿ ಆಸ್ಪತ್ರೆ. ಇದರಿಂದ  ಸುತ್ತಮುತ್ತಲೂ ಏನಾದರೂ ಅವಗಡ ಸಂಭವಿಸಿ ದಾಗ  ರೋಗಿಗಳನ್ನು ಇದೇ ಆಸ್ಪತ್ರೆಗೆ 108ರ ಮೂಲಕ ತರಬೇಕು. ಆದರೆ, 108 ವಾಹನ ಅಥವಾ ಆ್ಯಂಬ್ಯುಲನ್ಸ್  ವಾಹನ ಬರಲು  ಸರಿಯಾದ ರಸ್ತೆಯೇ ಇಲ್ಲ.  ಮಳೆ ಬಂದರಂತೂ ಈ  ರಸ್ತೆಯ ಸ್ಥಿತಿ ಹೇಳತೀರದು. ಆಸ್ಪತ್ರೆಯ ಆವರಣವು ಜೇಡಿ ಮಣ್ಣಿನಂದ ಕೂಡಿದ್ದು ಸಂಚರಿಸಲು ಬಾರದಂತಾಗಿದೆ.ಮೇಲಷ್ಟೇ ಉಸುಕು ಹಾಕಿದರೂ  ಪ್ರಯೋಜನವಾಗಿಲ್ಲ. ಗಾಮಕ್ಕೆ ಅರ್ಧ ಕಿ.ಮಿ.ಗಿಂತಲೂ ದೂರವಿರುವ ಈ ಆಸ್ಪತೆಗೆ ಸರಿಯಾದ ದೂರವಾಣಿ ಹಾಗೂ ಅಂತರ್ಜಾಲ  ಸೌಲಭ್ಯವೂ ಇಲ್ಲ. ಈ ರಸ್ತೆಯಲ್ಲಿ ಬೀದಿ  ದೀಪದ ವ್ಯವಸ್ಥೆ ಇಲ್ಲ. ಸಂಜೆ ಆರು ಗಂಟೆಯಾದರೆ ಇತ್ತ ಯಾರೂ  ಸುಳಿವುದೂ ಇಲ್ಲ. ಈ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು ಇಲ್ಲ ದಂತಾಗಿದೆ ಎಂದು  ಜಗಾಪುರದ  ಮಹಿಳೆ ಪಾರ್ವತಿ ಹೇಳುತ್ತಾರೆ. ಇದರ ಬಗ್ಗೆ ಆಸ್ಪತ್ರೆ ವೈದ್ಯಾಧಿಕಾರಿ  ಡಾ.ಸುಜಾತಾ ಪಾಟೀಲರನ್ನು ಕೇಳಿದರೆ `ರಸ್ತೆ ಬಗ್ಗೆ ಗ್ರಾಮ ಪಂಚಾಯಿತಿಗೆ ಹಾಗೂ ತಾಲ್ಲೂಕು ಪಂಚಾಯತಿಗೆ ಮನವಿ  ಸಲ್ಲಿಸಿ ್ದದೇವೆ. ಮಳೆಗಾಲದಲ್ಲಂತೂ ಗಂಭೀರವಾಗಿ ಅಸ್ವಸ್ಥ ರಾದ ರೋಗಿಗಳನ್ನು ತರಲು ಹರಸಾಹಸ ಪಡ ಬೇಕಾದ ದು:ಸ್ಥಿತಿ ಇದೆ.ನರಗುಂದ ಪಟ್ಟಣದ 38  ಹಾಗೂ ಸುತ್ತಮುತ್ತಲಿನ ಗ್ರಾಮಗಳ 20  ಅಂಗನವಾಡಿಗಳು ಸೇರಿದಂತೆ ಒಟ್ಟು 58 ಅಂಗನವಾಡಿಗಳು  ಸಭೆ  ಪ್ರತಿ ತಿಂಗಳು ಇಲ್ಲಿಯೇ ನಡೆಯಲಿದೆ. ಇದರಿಂದ ಇಲ್ಲಿ ಸರಿಯಾಗಿ ಮೂಲ ಸೌಲಭ್ಯ ಮರೀಚಿಕೆಯಾಗಿವೆ.

ಈ ಕುರಿತು  ಹುಣಸಿಕಟ್ಟಿ ಗ್ರಾಮಪಂಚಾಯಿತಿ  ಗ್ರಾಮೀಣಾಭಿವೃದ್ಧಿ ಅಧಿಕಾರಿ  ಉಪ್ಪಾರ ಅವರನ್ನು  ಕೇಳಿದರೆ `ಬೀದಿ ದೀಪಗಳನ್ನು ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ರಸ್ತೆ ಬಗ್ಗೆ ಜಿಲ್ಲಾ ಪಂಚಾಯಿತಿಗೆ ತಿಳಿಸಲಾಗಿದೆ. ನಿರ್ಮಿಸುವ ಭರವಸೆ ನೀಡಿದ್ದಾರೆ ಎಂದರು.  ಆದ್ದರಿಂದ ಕೂಡಲೇ ಇಲ್ಲಿ ರಸ್ತೆ, ಬೀದಿ ದೀಪದ  ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯ ವಿಸ್ತರಿ ಸುವುದು ಅವಶ್ಯವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry