ಸೌವಿಕ್ ಪಾಲ್ ಶವ ಮುಂದಿನ ವಾರ ಭಾರತಕ್ಕೆ

7

ಸೌವಿಕ್ ಪಾಲ್ ಶವ ಮುಂದಿನ ವಾರ ಭಾರತಕ್ಕೆ

Published:
Updated:
ಸೌವಿಕ್ ಪಾಲ್ ಶವ ಮುಂದಿನ ವಾರ ಭಾರತಕ್ಕೆ

ಲಂಡನ್ (ಪಿಟಿಐ): ಇಲ್ಲಿಯ ಮ್ಯಾಂಚೆಸ್ಟರ್‌ನ ಕಾಲುವೆಯಲ್ಲಿ ಶವವಾಗಿ ಪತ್ತೆಯಾದ ಬೆಂಗಳೂರಿನ ವಿದ್ಯಾರ್ಥಿ ಸೌವಿಕ್ ಪಾಲ್ ಶವದೊಂದಿಗೆ ಆತನ ತಂದೆ ಮುಂದಿನ ವಾರ ಭಾರತಕ್ಕೆ ಹಿಂತಿರುಗುತ್ತಾರೆ.ಸೌವಿಕ್ ಸಾವಿನ ಕುರಿತು ನಡೆಯುತ್ತಿರುವ ತನಿಖೆ ಪ್ರಕ್ರಿಯೆ ಈ ವೇಳೆಗಾಗಲೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು ವಿಷವುಣಿಸಿ ಕೊಲೆಮಾಡಿರುವ ಸಾಧ್ಯತೆಯ ಕುರಿತೂ ನಡೆಸಿದ ತನಿಖೆಯ ವರದಿ ಕಾಯಲಾಗುತ್ತಿದೆ. ಈ ಎಲ್ಲ ಪ್ರಕ್ರಿಯೆ ಮುಗಿದು ಬುಧವಾರದ ಹೊತ್ತಿಗೆ ಭಾರತಕ್ಕೆ ವಾಪಸಾಗುವ ನಿರೀಕ್ಷೆಯಲ್ಲಿರುವೆ ಎಂದು ಸೌವಿಕ್ ತಂದೆ ಶಾಂತನು ಪಾಲ್ ತಿಳಿಸಿದರು.`ಸೌವಿಕ್ ಇನ್ನಿಲ್ಲ ಎನ್ನುವುದನ್ನು ನಾನು ನಿರೀಕ್ಷಿಸಲೂ ಆಗುತ್ತಿಲ್ಲ. ಆತನಿಗೆ ಕಲೆಯಲ್ಲಿ ಅಪಾರ ಆಸಕ್ತಿ ಇದ್ದು ಕಲಾಕೃತಿಗಳನ್ನು ನನ್ನೊಂದಿಗೆ ತೆಗೆದುಕೊಂಡು ಹೋಗುವೆ' ಎಂದು ಶಾಂತನು ಮಗನ ಒಡನಾಟವನ್ನು ಸ್ಮರಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry