ಸೌಹಾರ್ದತೆ ಕನ್ನಡ ಮಣ್ಣಿನ ಗುಣ

7

ಸೌಹಾರ್ದತೆ ಕನ್ನಡ ಮಣ್ಣಿನ ಗುಣ

Published:
Updated:

ಹೊಳೆನರಸೀಪುರ: `ಸಾಂಸ್ಕೃತಿಕವಾಗಿ ಕನ್ನಡ, ಹಾಗೂ ಕನ್ನಡಿಗರು ಹಿಂದುಳಿದಿಲ್ಲ. ಸಂಗೀತ, ನಾಟಕ, ನೃತ್ಯ ರಂಗಭೂಮಿ, ಜನಪದ ಕತೆಗಳು, ಚಿತ್ರಕಲೆ ಮುಂತಾದ ಕ್ಷೇತ್ರಗಳಲ್ಲಿ ಕನ್ನಡ ತನ್ನದೇ ಆದ ಶ್ರೀಮಂತಿಕೆ ಉಳಿಸಿಕೊಂಡಿದೆ ಎಂದು 3ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಕೆ.ಸಿ. ಮರಿಯಪ್ಪ ನುಡಿದರು.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ದಲ್ಲಿ ಅವರು ನಾಡು- ನುಡಿ ಕುರಿತ ಹತ್ತಾರು ವಿಚಾರಗಳನ್ನು ಪ್ರಸ್ತಾಪಿಸಿದರು.ಬೇರೆ ಭಾಷೆಗಳ ಮೇಲಿನ ವ್ಯಾಮೋಹ ಕನ್ನಡಿಗರಲ್ಲಿ ಇದ್ದರೂ ಕನ್ನಡ ನಾಡಿನ  ನೆಲ, ಜಲ, ಭಾಷೆಯ ವಿಷಯ ಬಂದಾಗ ಎಲ್ಲರೂ ಒಂದಾಗುತ್ತಾರೆ. ಅಂತಹ ಗುಣ ಕನ್ನಡಿಗರಿಗೆ ಈ ಮಣ್ಣಿನಿಂದಲೇ ದೊರೆತಿದೆ. ಎಂದೆಂದಿಗೂ ಇಂತಹ ಮನೋಭಾವ ಉಳಿಸಿಕೊ ಳ್ಳೋಣ ಎಂದ ಹೇಳಿದರುತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ವೆಂಕಟಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉದಯರವಿ ಅವರು ಮಾತನಾಡಿದರು.ನಂತರ ನಡೆದ `ಶೋಷಿತ ಮಹಿಳೆ ಬದಲಾಗಿ ರುವಳೆ ಅಥವಾ ಬದಲಾಗಬೇಕೆ ಎನ್ನುವ ಚರ್ಚಾಗೋಷ್ಟಿ ಯಲ್ಲಿ ಲೇಖಕಿ ಮಂಗಳಾ ಸತ್ಯನ್, ಕಾವ್ಯಶ್ರೀ ಕೃಷ್ಣ, ಪ್ರೇಮಾ ಮಂಜು ನಾಥ್, ಲಕ್ಷ್ಮೀನಾಗರಾಜ್, ಎನ್.ಡಿ. ಮಂಜುಳಾ, ನಾಗವೇಣಿ, ಕುಮುದಾ, ಮಂಜುಳಾ  ಮಾತನಾಡಿ ಮಹಿಳೆ ಸಾಕಷ್ಟು ಬದಲಾಗಿದ್ದಾಳೆ.

 

ಕೆಲವರು ಗಂಡಸರಿಗೆ ಕಿರುಕುಳ ನೀಡುವಷ್ಟು ಬದಲಾ ಗಿದ್ದಾರೆ ಇದು ಸಲ್ಲದು. ನಾವು ಎಷ್ಟು ಬದಲಾಗ ಬೇಕೋ ಅಷ್ಟು ಬದಲಾಗಿ ಸಮರಸದ ಜೀವನಕ್ಕೆ ಪೂರಕವಾಗಿ ರಬೇಕು ಎಂದು ಅಭಿಪ್ರಾಯಪಟ್ಟರು.ನಂತರ ನಡೆದ ಕವಿಗೋಷ್ಠಿಯಲ್ಲಿ ಬಾ.ರಾ. ಸುಬ್ಬರಾಯ, ಎಚ್.ವಿ. ಸುರೇಶ್ ಕುಮಾರ್, ಗಿರಿರಾಜ್, ಪ್ರಭುಶಂಕರ್, ಶಿವಕುಮಾರಾ ಚಾರ್, ಕುಮಾರ್ ಛಲವಾದಿ, ಬಾ.ನಂ. ಲೋಕೇಶ್, ಕೃಷ್ಣ, ಹರೀಶ್ ಕಟ್ಟೆಬೆಳಗುಲಿ, ಕಿಶೋರ್‌ಕುಮಾರ್, ಎಚ್.ಡಿ. ಗುರುಪ್ರಸಾದ್, ಜಿ.ಪಿ. ಅಣ್ಣಾಜಪ್ಪ, ಕುಮಾರಸ್ವಾಮಿ, ದಿವಾಕರ್, ಚೇತನಾ, ವೀರ ಬಸಪ್ಪ ಸ್ವರಚಿತ ಕವನ ಹೇಳಿ ರಂಜಿಸಿದರು. ಈ ಸಂದರ್ಭದಲ್ಲಿ ಪ್ರಿಯದರ್ಶಿನಿ ಅಯ್ಯಂಗಾರ್ ಇದ್ದರು.ಶಾಲಾ ಮಕ್ಕಳು ನಂತರ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಜನರ ಮೆಚ್ಚುಗೆ ಗಳಿಸಿತು. ಪುರಸಭಾಧ್ಯಕ್ಷೆ ವಿನೋದಾ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಶಿವಕುಮಾರ್, ಟಿ. ಮಲ್ಲೇಶ್, ಸಮ್ಮೇಳನದ ಗೌರವಾಧ್ಯಕ್ಷರಾದ ತಹಶೀಲ್ದಾರ್ ವಿ. ಮಂಜುನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್.ಆರ್. ಅನಂತ್, ಉಪಾಧ್ಯಕ್ಷೆ ಶಶಿಕಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಕೆ. ಶಿವರಾಜ್, ವೈ.ವಿ. ಚಂದ್ರಶೇಖರ್, ಕಿಟ್ಟಿ, ಎನ್.ಎಸ್. ರಾಧಾಕೃಷ್ಣ, ಆರ್. ರಂಗ ಸ್ವಾಮಿ, ಎಚ್.ಬಿ. ವೆಂಕಟೇಶ್, ಎಚ್.ಎನ್. ವೆಂಕಟೇಶ್, ರಾಘವೇಂದ್ರ, ಪ್ರಮೋದ್, ನಾಸಿರ್, ಭಾನುಮತಿ, ಬಿ.ಎನ್. ರಾಮಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಶಾಂತಶೆಟ್ಟಿ, ಪ್ರಾಂಶುಪಾಲರಾದ ಟಿ.ಎಂ. ಪರಮೇಶ್ವ ರಯ್ಯ, ಬಸವಣ್ಣ, ಡಿಎಸ್‌ಪಿ ಕೆ. ಪರಶುರಾಮ್, ಶಿಕ್ಷಕ ಸಂಘದ ಅಧ್ಯಕ್ಷ ರಾಜೇಗೌಡ,.

 

ಸಾಹಿತಿ ಬಂಗಾರಪ್ಪ, ನಾಗೇಶ್ ಕೌಂಡಿನ್ಯ, ಆರ್.ಬಿ. ಪುಟ್ಟೇಗೌಡ, ದಿಲೀಪ್‌ಕುಮಾರ್ ಜೈನ್, ಎಚ್.ಟಿ. ನರಸಿಂಹಶೆಟ್ಟಿ, ಎಚ್.ಟಿ. ಲಕ್ಷ್ಮಣ, ಷನ್ಮುಖಯ್ಯ, ಪ್ರೇಮಾ ಮಂಜುನಾಥ್, ಸುಧಾನಳಿನಿ, ಕಾಂತರಾಜು, ರಾಧಾಕೃಷ್ಣಬಾಬು, ಮಂಜುನಾಥ್, ಎಚ್.ಎಸ್. ಸುದರ್ಶನ್, ಎಸ್. ಗೋಕುಲ್, ಪುರಸಭಾ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry