ಸ್ಕಲ್ಲರ್ಸ್‌ನಲ್ಲಿ ಬೆನ್ನಿ ಪ್ರಸಾದ್

7

ಸ್ಕಲ್ಲರ್ಸ್‌ನಲ್ಲಿ ಬೆನ್ನಿ ಪ್ರಸಾದ್

Published:
Updated:
ಸ್ಕಲ್ಲರ್ಸ್‌ನಲ್ಲಿ ಬೆನ್ನಿ ಪ್ರಸಾದ್

ಸಂಗೀತದ ನಿನಾದ ಬ್ರಿಗೆಡ್ ರಸ್ತೆಯ ಸ್ಕಲ್ಲರ್ಸ್‌ ಮಳಿಗೆ ತುಂಬೆಲ್ಲಾ ಆವರಿಸಿತ್ತು. ಮನಮುಟ್ಟುವ ಸಂಗೀತದೊಂದಿಗೆ `ದಿಸ್ ಈಸ್ ಲೈಫ್~ ಕಾರ್ಯಕ್ರಮ ನಡೆಸಿಕೊಟ್ಟವರು ಡಾ. ಬೆನ್ನಿ ಪ್ರಸಾದ್.ಭಾರತದಲ್ಲಿ ಅತಿ ಹೆಚ್ಚು ಸಂಚರಿಸಿರುವ ಸಂಗೀತಗಾರ ಡಾ. ಬೆನ್ನಿ ಪ್ರಸಾದ್, `ಮ್ಯೂಸಿಕ್ ಈಸ್ ಲೈಫ್~ನಲ್ಲಿ ತಮ್ಮ ಸಂಗೀತ ಕ್ಷೇತ್ರದ ಅನುಭವ ಹಂಚಿಕೊಂಡರು. `ಸ್ಕಲ್ಲರ್ಸ್‌ ದಿಸ್ ಈಸ್ ಲೈಫ್‌ನ ಒಂದು ಭಾಗವಾಗುವುದು ನನ್ನ ಕರ್ತವ್ಯ. ನನ್ನ ಅನುಭವ ಹಂಚಿಕೊಳ್ಳಲು ವೇದಿಕೆ ಒದಗಿಸಿಕೊಟ್ಟಿದ್ದಕ್ಕೆ ಕೃತಜ್ಞನಾಗಿದ್ದೇನೆ. ವಿಶೇಷವಾಗಿ ನನ್ನ ತವರಿನಲ್ಲೇ ಈ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ~ ಎಂದರು.`ಸಂಗೀತ, ಕಲೆ, ಸೇರಿದಂತೆ ನಾನಾ  ಕ್ಷೇತ್ರದ ಸಾಧಕರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶವನ್ನು ಸ್ಕಲ್ಲರ್ಸ್‌ ಹೊಂದಿದೆ. ಬದುಕಿನಲ್ಲಿ ಅಭಿರುಚಿಗಳನ್ನು ಉತ್ತೇಜಿಸುವ ಧ್ಯೇಯ ಇದರ ಹಿಂದಿದೆ~ ಎನ್ನುತ್ತಾರೆ ಇಂಡಸ್‌ಲೀಗ್ ಕ್ಲಾಥಿಂಗ್‌ನ ಸಿಇಒ ರಚನ ಅಗರ್‌ವಾಲ್.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry