ಸ್ಕೇಟಿಂಗ್‌ನಲ್ಲಿ ವಿದ್ಯಾರ್ಥಿಗಳ ಸಾಧನೆ

ಭಾನುವಾರ, ಮೇ 26, 2019
27 °C

ಸ್ಕೇಟಿಂಗ್‌ನಲ್ಲಿ ವಿದ್ಯಾರ್ಥಿಗಳ ಸಾಧನೆ

Published:
Updated:

ಬೆಳಗಾವಿ: ಬೆಂಗಳೂರಿನಲ್ಲಿ ಈಚೆಗೆ ನಡೆದ ಕೇಂದ್ರೀಯ ವಿದ್ಯಾಲಯದ ವಲಯ ಮಟ್ಟದ ಸ್ಕೇಟಿಂಗ್ ಚಾಂಪಿ ಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದ ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಸ್ಕೇಟರ್‌ಗಳು ಐದು ಚಿನ್ನ, ಆರು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳನ್ನು ಗೆದ್ದು ಕೊಂಡಿದ್ದಾರೆ.ಬೆಳಗಾವಿ ಕೇಂದ್ರೀಯ ವಿದ್ಯಾಲಯ ನಂ. 2ರ ವಿದ್ಯಾ ರ್ಥಿಗಳಾದ ಪ್ರತೀಕ್ ಮೇಟಿ ಎರಡು ಚಿನ್ನ; ವಿಶ್ವಜಿತ ಚಿಕ್ಕೋಡಿ ಒಂದು ಚಿನ್ನ, ಒಂದು ಬೆಳ್ಳಿ; ಚಿರಾಗ ಕಪಿಲ್ ಒಂದು ಚಿನ್ನ, ಎರಡು ಬೆಳ್ಳಿ; ಶ್ರುತಿ ಜೋಶಿ ಒಂದು ಚಿನ್ನ, ಒಂದು ಬೆಳ್ಳಿ; ತ್ರಿಷಾ ಮಿರ್ಜಿ ಒಂದು ಬೆಳ್ಳಿ, ಕೇದಾರ ಕಾರ್ಪೆ ಒಂದು ಬೆಳ್ಳಿ, ತುಷಾರ ಪ್ರಭು ಎರಡು ಕಂಚು, ರಾಧಿಕಾ ಮಲ್ಲಾಪುರ ಎರಡು ಕಂಚು ಹಾಗೂ ಅನುಜ ಪಾಲ್ ಒಂದು ಕಂಚು ಪದಕಗಳನ್ನು ಗೆದ್ದು ಕೊಂಡಿದ್ದಾರೆ.ಚಿನ್ನದ ಪದಕ ಗೆದ್ದ ಸ್ಕೇಟಿಂಗ್ ಪಟುಗಳಾದ ಪ್ರತೀಕ ಮೇಟಿ, ವಿಶ್ವಜಿತ ಚಿಕ್ಕೋಡಿ, ಚಿರಾಗ ಕಪಿಲ್ ಹಾಗೂ ಶ್ರುತಿ ಜೋಶಿ ಅವರು ಪಂಜಾಬ್‌ನ ಚಂಡೀಗಡದಲ್ಲಿ ಇದೇ 24ರಿಂದ 27ರವರೆಗೆ ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿ ದ್ದಾರೆ.ಕೇಂದ್ರೀಯ ವಿದ್ಯಾಲಯ ನಂ. 2ರ ಪ್ರಾಚಾರ್ಯ ಮುರಳಿಕೃಷ್ಣನ್ ಹಾಗೂ ಕ್ರೀಡಾ ಶಿಕ್ಷಕ ಜಿ.ಎಲ್. ಇಂಡಿ ಅವರು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ್ದರು.  ಸೂರ್ಯಕಾಂತ ಹಿಂಡಲಗೇಕರ, ಶಶಿಧರ ಪೊಲ್, ವಿಶಾಲ್ ವಾಸನೆ, ವಿನಾಯಕ ಶಿರೆಕರ, ಮಂಜುನಾಥ ಮಂಡೊಳಕರ ತರಬೇತಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry