ಬುಧವಾರ, ಮೇ 12, 2021
18 °C

ಸ್ಕೋಡಾ: ಲೌರಾ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಕೋಡಾ: ಲೌರಾ ಮಾರುಕಟ್ಟೆಗೆ

ಹರಿಯಾಣ (ಪಿಟಿಐ): ಫೋಕ್ಸ್‌ವ್ಯಾಗನ್ ಸಮೂಹದ ಸ್ಕೋಡಾ ಆಟೊ ಇಂಡಿಯಾ ಮಂಗಳವಾರ ಇಲ್ಲಿ ವಿಲಾಸಿ ಸೇಡಾನ್ ಮಾದರಿ `ಲೌರಾ ಆರ್‌ಎಕ್ಸ್~  ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಕಾರಿನ ದೆಹಲಿ ಎಕ್ಸ್‌ಷೋರೂಂ ಬೆಲೆ ರೂ.15.49 ಲಕ್ಷ ಇದೆ.ಮುಂದಿನ ತಲೆಮಾರಿನ ತಂತ್ರಜ್ಞಾನ ಹೊಂದಿರುವ ಲೌರಾ ಹೆಚ್ಚಿನ ಭದ್ರತೆ ಮತ್ತು ಆರಾಮದಾಯಕ ಸವಾರಿ ಖಾತರಿಗೊಳಿಸುತ್ತದೆ. ಕಾರಿನೊಂದಿಗೆ ಭಾವನಾತ್ಮಕ ಸಂಬಂಧ ಇಟ್ಟುಕೊಳ್ಳುವ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆ ಇದು ಎಂದು ಸ್ಕೋಡಾ ಆಟೊ ಇಂಡಿಯಾದ ಮಾರುಕಟ್ಟೆ ಮುಖ್ಯಸ್ಥ ತರುಣ್ ಝಾ ಹೇಳಿದ್ದಾರೆ.

1.8 ಲೀಟರ್ ಟಿಎಸ್‌ಐ ಪೆಟ್ರೋಲ್ ಎಂಜಿನ್ ಹೊಂದಿರುವ ಲೌರಾ, 13.4 ಕಿ.ಮೀ ಇಂಧನ ಕ್ಷಮತೆ ಹೊಂದಿದೆ.`ಲೌರಾ~ ತಯಾರಿಕೆಯು ಮಾರುಕಟ್ಟೆ ಬೇಡಿಕೆ ಆಧರಿಸಿ ಸೀಮಿತವಾಗಿರುತ್ತದೆ. ಆದರೆ, ವರ್ಷಾಂತ್ಯಕ್ಕೆ ಕಂಪೆನಿ ಮತ್ತೊಂದು ಹೊಸ ಸೇಡಾನ್ ಮಾದರಿಬಿಡುಗಡೆ ಮಾಡಲಿದೆ ಎಂದು ಝಾ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.