ಬುಧವಾರ, ಅಕ್ಟೋಬರ್ 16, 2019
21 °C

ಸ್ಕ್ವಾಷ್: ಅನಕಾಗೆ ಎರಡನೇ ಸ್ಥಾನ

Published:
Updated:

ಚೆನ್ನೈ (ಐಎಎನ್‌ಎಸ್): ಭಾರತದ ಮಹೇಶ್ ಮಂಗೋನಕರ್ ಹಾಗೂ ಅನಕಾ ಅಲಂಕಮೋನಿ ಡಬ್ಲ್ಯುಎಸ್‌ಎಫ್ ವಿಶ್ವ ಜೂನಿಯರ್ ಸ್ಕ್ವಾಷ್ ಫೆಡರೇಷನ್ ಬಿಡುಗಡೆ ಮಾಡಿರುವ ರ‌್ಯಾಂಕಿಂಗ್ ಪಟ್ಟಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ನಡೆದ ಇಂಡಿಯನ್ ಜೂನಿಯರ್ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಮಹೇಶ್ ಚಾಂಪಿಯನ್ ಆಗಿದ್ದರು. ಇದು ಸ್ಥಾನ ಉತ್ತಮ ಪಡಿಸಿಕೊಳ್ಳಲು ನೆರವಾಗಿದೆ. ರನ್ನರ್ ಅಪ್ ಆಗಿದ್ದ ಬೆಲ್ಜಿಯಂನ ಎ. ಮೊಹಮ್ಮದ್ ಮೂರನೇ ಸ್ಥಾನ ಪಡೆದಿದ್ದಾರೆ. ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿಯೂ ಮಹೇಶ್ ಕಂಚಿನ ಪದಕ  ಜಯಿಸಿದ್ದರು.

Post Comments (+)