ಬುಧವಾರ, ಜನವರಿ 22, 2020
16 °C

ಸ್ಕ್ವಾಷ್: ಕ್ವಾರ್ಟರ್‌ಫೈನಲ್‌ಗೆ ಅನಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಫೀಲ್ಡ್, ಇಂಗ್ಲೆಂಡ್ (ಐಎಎನ್‌ಎಸ್): ಭಾರತದ ಅನಕಾ ಅಲಂಕಮೋನಿ ಇಲ್ಲಿ ನಡೆಯುತ್ತಿರುವ ಬ್ರಿಟಿಷ್ ಓಪನ್ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.ಬುಧವಾರ ನಡೆದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಅನಕಾ 12-10, 11-9, 11-8ರಲ್ಲಿ ಆತಿಥೇಯ ರಾಷ್ಟ್ರದ ಟೆಂಪಲ್ ಮರ‌್ರೆ ಎದುರು ಗೆಲುವು ಸಾಧಿಸಿದರು.19 ವರ್ಷದೊಳಗಿನವರ ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಮಹೇಶ್ ಮಂಗೋನಕರ್ ಹಾಗೂ ಅಭಿಷೇಕ್ ಪ್ರಧಾನ್, 17 ವರ್ಷದೊಳಗಿನವರ ವಿಭಾಗದಲ್ಲಿ ಕುಶ್ ಕುಮಾರ್ ಬಾಲಕಿಯರ ವಿಭಾಗದಲ್ಲಿ ಅಪರಾಜಿತಾ ಬಾಲ ಮುರುಕನ್  ಚಾಂಪಿಯನ್‌ಷಿಪ್‌ನಿಂದ ಹೊರ ಬಿದ್ದಿದ್ದಾರೆ.ಈಜಿಪ್ತ್‌ನ ಮೊಹಮ್ಮದ್ ಅಬು 11-7, 11-7, 11-5ರಲ್ಲಿ ಮಹೇಶ್ ಮೇಲೂ, ಪಾಕಿಸ್ತಾನದ ಸೈಯದ್ ಅಲಿ ಬುಖಾರಿ 11-7, 11-9, 10-12, 11-9ರಲ್ಲಿ ಕುಶ್ ವಿರುದ್ಧ ಗೆದ್ದರು.

ಪ್ರತಿಕ್ರಿಯಿಸಿ (+)