ಸ್ಕ್ವಾಷ್: ಘೋಷಾಲ್ ಚಾಂಪಿಯನ್

7

ಸ್ಕ್ವಾಷ್: ಘೋಷಾಲ್ ಚಾಂಪಿಯನ್

Published:
Updated:
ಸ್ಕ್ವಾಷ್: ಘೋಷಾಲ್ ಚಾಂಪಿಯನ್

ನವದೆಹಲಿ (ಪಿಟಿಐ): ರಾಷ್ಟ್ರೀಯ ಚಾಂಪಿಯನ್ ಭಾರತದ ಸೌರವ್ ಘೋಷಾಲ್ ಅವರ ಸಾಧನೆಗಳ ಹಿರಿಮೆಗೆ ಮತ್ತೊಂದು ಗರಿ ಸೇರಿದೆ. ಅವರು `ವಿಂಡಿ ಸಿಟಿ ಓಪನ್ ಸ್ಕ್ವಾಷ್-2012~ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ಫೈನಲ್‌ನಲ್ಲಿ ಸೌರವ್ 11-8, 15-13, 10-12, 11-5 (3-1)ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಯಾಸಿರ್ ಬಟ್ ಅವರನ್ನು ಮಣಿಸಿ ಈ ಸಾಧನೆ ಮಾಡಿದ್ದಾರೆ.ವಿಶ್ವದ 27ನೇ ರ‌್ಯಾಂಕ್‌ನ ಆಟಗಾರ ಘೋಷಾಲ್ ಸ್ಥಿರ ಆಟದ ಮೂಲಕ ಈ ಶ್ರೇಯಕ್ಕೆ ಪಾತ್ರರಾದರು. ಈ ಹಾದಿಯಲ್ಲಿ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಕಳೆದ ಬಾರಿಯ ಚಾಂಪಿಯನ್ ಇಂಗ್ಲೆಂಡ್‌ನ ಆಲಿವರ್ ಪೆಟ್ ಅವರನ್ನು ಸೋಲಿಸಿದ್ದರು. ಬಳಿಕ ಸೆಮಿಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ ಅಲನ್ ಕ್ಲೈನ್ ಎದುರು ಗೆದ್ದಿದ್ದರು.ಫೈನಲ್ ಹೋರಾಟ ಆರಂಭದಿಂದಲೇ ಕುತೂಹಲಕ್ಕೆ ಕಾರಣವಾಗಿತ್ತು. ಏಕೆಂದರೆ ಪಾಕ್‌ನ ಯಾಸಿರ್ ಸುಲಭವಾಗಿ ಸೋಲು ಒಪ್ಪಿಕೊಳ್ಳಲಿಲ್ಲ. ಅದಕ್ಕೆ ಸಾಕ್ಷಿ ಮೂರನೇ ಗೇಮ್‌ನಲ್ಲಿ ಅವರು 12-10ರಲ್ಲಿ ಎದುರಾಳಿಯನ್ನು ಮಣಿಸಿದ್ದು. ಆದರೆ ನಾಲ್ಕನೇ ಸೆಟ್‌ನಲ್ಲಿ ಭಾರತದ ಆಟಗಾರ ಪಾರಮ್ಯ ಮೆರೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry