ಸ್ಕ್ವಾಷ್: ಜೋಷ್ನಾ, ಅನಕಾ ಪ್ರಮುಖ ಆಕರ್ಷಣೆ

6

ಸ್ಕ್ವಾಷ್: ಜೋಷ್ನಾ, ಅನಕಾ ಪ್ರಮುಖ ಆಕರ್ಷಣೆ

Published:
Updated:

ಚೆನ್ನೈ (ಪಿಟಿಐ): ಜೋಷ್ನಾ ಚಿಣ್ಣಪ್ಪ ಹಾಗೂ ಅನಕಾ ಅಲಂಕಮೋನಿ ಅವರು ಮೇ 22ರಿಂದ 26ರವರೆಗೆ ಇಲ್ಲಿ ನಡೆಯಲಿರುವ ಡಬ್ಲ್ಯುಎಸ್‌ಎ ಚೆನ್ನೈ ಓಪನ್ ಸ್ಕ್ವಾಷ್ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ.ಹತ್ತು ಸಾವಿರ ಡಾಲರ್ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ಮಲೇಷ್ಯಾ, ಆಸ್ಟ್ರೇಲಿಯಾ, ಈಜಿಪ್ಟ್, ಇಂಗ್ಲೆಂಡ್ ಹಾಗೂ ಆತಿಥೇಯ ಭಾರತದ ಆಟಗಾರ್ತಿಯರು ಪಾಲ್ಗೊಳ್ಳಲಿದ್ದಾರೆ.ಚಾಂಪಿಯನ್ ಹಾಗೂ ರನ್ನರ್‌ಅಪ್ ಆಗುವವರು ನಗದು ಬಹುಮಾನದ ಜೊತೆಗೆ ಕ್ರಮವಾಗಿ 350 ಹಾಗೂ 280 ರ‌್ಯಾಂಕಿಂಗ್ ಪಾಯಿಂಟುಗಳನ್ನು ಗಳಿಸುವರು.ವಿಶ್ವ 40ನೇ ಕ್ರಮಾಂಕದ ಆಟಗಾರ್ತಿ ಮಲೇಷ್ಯಾದ ಸಿತಿ ಮುನಿರಾಹ್ ಜೊಸೊಹ್ ಅವರಿಗೆ ಈ ಟೂರ್ನಿಯಲ್ಲಿ ಅಗ್ರಶ್ರೇಯಾಂಕ ನೀಡಲಾಗಿದೆ.ಆದರೆ ಜೋಷ್ನಾ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಗಾಯದ ಕಾರಣ ದೀರ್ಘ ಕಾಲ ವಿರಾಮ ಪಡೆದಿದ್ದ ಜೋಷ್ನಾ ಆಡಲಿರುವ ಎರಡನೇ ಡಬ್ಲ್ಯುಎಸ್‌ಎ ಟೂರ್ನಿ ಇದಾಗಿದೆ.ಅರ್ಹತಾ ಸುತ್ತಿನ ಪಂದ್ಯಗಳು ಮೇ 22ರಂದು ನಡೆಯಲಿದ್ದು ಪ್ರಧಾನ ಹಂತದ ಪಂದ್ಯಗಳು ಮರುದಿನ ಇಲ್ಲಿನ ಇಂಡಿಯನ್ ಸ್ಕ್ವಾಷ್ ಅಕಾಡೆಮಿಯಲ್ಲಿ ಆರಂಭವಾಗಲಿವೆ  ಎಂದು ತಮಿಳುನಾಡು ಸ್ಕ್ವಾಷ್ ರಾಕೆಟ್ ಸಂಸ್ಥೆ (ಟಿಎನ್‌ಎಸ್‌ಆರ್‌ಎ) ಪ್ರಧಾನ ಕಾರ್ಯದರ್ಶಿ ಶ್ರೀವತ್ಸನ್ ಸುಬ್ರಮಣ್ಯಮ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry