ಸ್ಕ್ವಾಷ್: ದೀಪಿಕಾಗೆ 24ನೇ ಸ್ಥಾನ

7

ಸ್ಕ್ವಾಷ್: ದೀಪಿಕಾಗೆ 24ನೇ ಸ್ಥಾನ

Published:
Updated:

ನವದೆಹಲಿ (ಐಎಎನ್‌ಎಸ್):  ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ವಿಶ್ವ ರ್ಯಾಂಕಿಂಗ್ ಪಟ್ಟಿ ಯಲ್ಲಿ 24ನೇ ಸ್ಥಾನ ಪಡೆದಿ ದ್ದಾರೆ. ಇದರೊಂದಿಗೆ ಮಹಿಳೆ ಯರ ವಿಭಾಗದಲ್ಲಿ ಅತಿ ಹೆಚ್ಚು ರ್ಯಾಂಕ್ ಪಡೆದ ಭಾರತದ ಆಟಗಾರ್ತಿ ಎನ್ನುವ ಕೀರ್ತಿಗೂ ದೀಪಿಕಾ ಪಾತ್ರರಾಗಿದ್ದಾರೆದೀಪಿಕಾ ಕಳೆದ ಸಲದ ರ್ಯಾಂಕಿಂಗ್ ಪಟ್ಟಿಯಲ್ಲಿ ಮಾಜಿ ಆಟಗಾರ್ತಿ ಮಿಶಾ ಗ್ರೇವಾಲ್ ಅವರೊಂದಿಗೆ 27ನೇ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿದ್ದರು. ಆದರೆ ಈ ಸಲ 24ನೇ ಸ್ಥಾನವನ್ನು ಪಡೆಯುವಲ್ಲಿ ಯಶ ಕಂಡಿದ್ದಾರೆ.ಈ ವರ್ಷದ ಅಂತ್ಯದೊಳಗೆ ಅಗ್ರ ಹತ್ತರೊಳಗೆ ಸ್ಥಾನ ಪಡೆಯ ಬೇಕು ಎನ್ನುವ ಗುರಿ ಹೊಂದಿ ದ್ದೇನೆ. ಅದಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದೇನೆ. ನನ್ನ ಗುರಿಯನ್ನು ಸಾಧಿಸಿ ತೋರಿಸುತ್ತೇನೆ’ ಎಂದು ದೀಪಿಕಾ ಪಲ್ಲಿಕಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry