ಸ್ಕ್ವಾಷ್: ದೀಪಿಕಾ ಚಾಂಪಿಯನ್

6

ಸ್ಕ್ವಾಷ್: ದೀಪಿಕಾ ಚಾಂಪಿಯನ್

Published:
Updated:

ನವದೆಹಲಿ (ಪಿಟಿಐ): ಭಾರತದ ಅಗ್ರ ಶ್ರೇಯಾಂಕದ ಆಟಗಾರ್ತಿ ದೀಪಿಕಾ ಪಳ್ಳಿಕಲ್ ವಾಷಿಂಗ್ಟನ್‌ನಲ್ಲಿ ನಡೆದ ಡಬ್ಲ್ಯುಐಎಸ್‌ಪಿಎ ಡ್ರೆಡ್ ಸರಣಿ-2 ಸ್ಕ್ವಾಷ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಪಡೆದಿದ್ದಾರೆ.

ಸರಣಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಪಳ್ಳಿಕಲ್ 11-9, 11-3, 11-7ರಲ್ಲಿ ಇಂಗ್ಲೆಂಡ್‌ನ ಸರಾಹ ಜೇನ್ ಪೆರ್ರಿ ಅವರನ್ನು ಸೋಲಿಸಿದರು. ಇದು ಈ ವರ್ಷ ಅವರಿಗೆ ಲಭಿಸುತ್ತಿರುವ ಎರಡನೇ ಪ್ರಶಸ್ತಿಯಾಗಿದೆ.

ವಿಶೇಷವೆಂದರೆ ಒಂದೂ ಸೆಟ್ ಸೋಲದೆ ದೀಪಿಕಾ ಈ ಸಾಧನೆ ಮಾಡಿದ್ದಾರೆ. ಆದರೆ ಫೈನಲ್ ಭಾರಿ ಪ್ರತಿರೋಧ ಎದುರಿಸಬೇಕಾಯಿತು. ಶ್ರೇಯಾಂಕ ರಹಿತ ಆಟಗಾರ್ತಿ ಪೆರ್ರಿ ಮೊದಲ ಗೇಮ್‌ನಲ್ಲಿ 7-3ರಲ್ಲಿ ಮುನ್ನಡೆ ಸಾಧಿಸಿದ್ದರು. ನಂತರದ ಆ ಮುನ್ನಡೆ 9-5 ಆಯಿತು.

ಆದರೆ ಎಚ್ಚೆತ್ತುಕೊಂಡ ಪಳ್ಳಿಕಲ್ ಸತತ ಆರು ಪಾಯಿಂಟ್ ಪಡೆದ ಸೆಟ್ ತಮ್ಮದಾಗಿಸಿಕೊಂಡರು. ಅತ್ಯುತ್ತಮ ಕ್ರಾಸ್ ಕೋರ್ಟ್ ನಿಕ್, ಡ್ರಾಪ್‌ಗಳ ಮೂಲಕ ಅವರು ಗಮನ ಸೆಳೆದರು. ಎರಡು ಹಾಗೂ ಮೂರನೇ ಸೆಟ್ ಗೆದ್ದ ಭಾರತದ ಆಟಗಾರ್ತಿ ಟ್ರೋಫಿ ಎತ್ತಿ ಹಿಡಿದರು.

ಇತ್ತೀಚೆಗಷ್ಟೇ ಅವರು ವಿಶ್ವ ರ‌್ಯಾಂಕಿಂಗ್ ಪಟ್ಟಿಯಲ್ಲಿ 20 ಕ್ರಮಾಂಕದೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎನಿಸಿದ್ದಾರೆ. 20ರ ಹರೆಯದ ದೀಪಿಕಾ ಕಳೆದ ತಿಂಗಳು ಕ್ಯಾಲಿಫೋರ್ನಿಯಾದಲ್ಲಿ ನಡೆದ ಆರೇಂಜ್ ಕಂಟ್ರಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry