ಸ್ಕ್ವಾಷ್: ದೀಪಿಕಾ ಪಲ್ಲಿಕಲ್‌ಚಾಂಪಿಯನ್

ಸೋಮವಾರ, ಮೇ 27, 2019
27 °C

ಸ್ಕ್ವಾಷ್: ದೀಪಿಕಾ ಪಲ್ಲಿಕಲ್‌ಚಾಂಪಿಯನ್

Published:
Updated:

ನವದೆಹಲಿ (ಐಎಎನ್‌ಎಸ್): ಭಾರತದ ಅಗ್ರ ರ‌್ಯಾಂಕಿಂಗ್‌ನ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಕ್ಯಾಲಿಫೋರ್ನಿಯದಲ್ಲಿ ನಡೆದ ಆರೆಂಜ್ ಕೌಂಟಿ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಚಾಂಪಿಯನ್ ಆದರು.ಭಾನುವಾರ ನಡೆದ ಫೈನಲ್‌ನಲ್ಲಿ ದೀಪಿಕಾ 11-6, 12-10, 11-9 ರಲ್ಲಿ ಈಜಿಪ್ಟ್‌ನ ತತ್ರೆಬ್ ಅದೆಲ್ ವಿರುದ್ಧ ಗೆಲುವು ಪಡೆದರು. ವಿಶ್ವ ರ‌್ಯಾಂಕಿಂಗ್‌ನಲ್ಲಿ 24ನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿಗೆ ಪ್ರಸಕ್ತ ವರ್ಷ ಲಭಿಸಿದ ಮೊದಲ ಪ್ರಶಸ್ತಿ ಇದಾಗಿದೆ.ಸೆಮಿಫೈನಲ್‌ನಲ್ಲಿ ದೀಪಿಕಾ ಜಪಾನ್‌ನ ಮಿಸಾಕಿ ಕೊಬಯಶಿ ವಿರುದ್ಧ ಗೆಲುವು ಪಡೆದಿದ್ದರೆ, ಅದೆಲ್ ಅಮೆರಿಕದ ಲಟಾಶಾ ಖಾನ್ ಅವರನ್ನು ಮಣಿಸಿ ಅಚ್ಚರಿಗೆ ಕಾರಣರಾಗಿದ್ದರು. ದೀಪಿಕಾ ಟೂರ್ನಿಯುದ್ದಕ್ಕೂ ಪ್ರಭಾವಿ ಪ್ರದರ್ಶನ ನೀಡಿದರಲ್ಲದೆ, ಯಾವುದೇ ಸೆಟ್ ಕಳೆದುಕೊಳ್ಳದೆಯೇ ಚಾಂಪಿಯನ್‌ಪಟ್ಟ ತಮ್ಮದಾಗಿಸಿಕೊಂಡರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry