ಸ್ಕ್ವಾಷ್: ದೀಪಿಕಾ ಪಳ್ಳಿಕಲ್‌ಗೆ ಸೋಲು

7

ಸ್ಕ್ವಾಷ್: ದೀಪಿಕಾ ಪಳ್ಳಿಕಲ್‌ಗೆ ಸೋಲು

Published:
Updated:

ನವದೆಹಲಿ (ಪಿಟಿಐ): ಭಾರತದ ದೀಪಿಕಾ ಪಳ್ಳಿಕಲ್ ಐಸ್ಲ್ಯಾಂಡ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಓಪನ್ ಸ್ಕ್ವಾಷ್ ಚಾಂಪಿಯನ್‌ಷಿಪ್‌ನ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಂಡರು.ಬುಧವಾರ ಸೌತ್ ಸೌಂಡ್ ಸ್ಕಾಷ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ವಿಶ್ವ ರ‌್ಯಾಂಕಿಂಗ್ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿರುವ ದೀಪಿಕಾ 11-7, 9-11, 6-11, 5-11ರಲ್ಲಿ ಟೂರ್ನಿಯಲ್ಲಿ 13ನೇ ಶ್ರೇಯಾಂಕ ಹೊಂದಿರುವ  ಈಜಿಪ್ಟ್‌ನ ರೇನಮ್ ವೆಲಿಯಿಲಿ ಎದುರು ನಿರಾಸೆ ಅನುಭವಿಸಿದರು. ಈ ಹೋರಾಟ 38 ನಿಮಿಷ ನಡೆಯಿತು.ದೀಪಿಕಾ ಮೊದಲ ಸುತ್ತಿನ ಪಂದ್ಯದಲ್ಲಿ 3-0ರಲ್ಲಿ ಮಲೇಷ್ಯಾದ ದೇಲಿಯಾ ಅರ್ನೊಲ್ಡ್ ವಿರುದ್ಧ ಜಯ ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry