ಸ್ಕ್ವಾಷ್: ದೀಪಿಕಾ ಶುಭಾರಂಭ

7

ಸ್ಕ್ವಾಷ್: ದೀಪಿಕಾ ಶುಭಾರಂಭ

Published:
Updated:

ನವದೆಹಲಿ (ಐಎಎನ್‌ಎಸ್): ಭಾರತದ ದೀಪಿಕಾ ಪಲ್ಲಿಕಲ್ ಕೆರಿಬಿಯನ್ ಕಡಲು ಪ್ರದೇಶದಲ್ಲಿರುವ ಗ್ರಾಂಡ್ ಕೇಮನ್ ದ್ವೀಪದಲ್ಲಿ ನಡೆಯುತ್ತಿರುವ ವಿಶ್ವ ಓಪನ್ ಸ್ಕ್ವಾಷ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು.ಭಾನುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ದೀಪಿಕಾ 13-11, 11-9, 11-9 ರಲ್ಲಿ ಮಲೇಷ್ಯದ ಡೆಲಿಯಾ ಅರ್ನಾಲ್ಡ್ ವಿರುದ್ಧ ಜಯ       ಪಡೆದರು ಎಂದು ಇಲ್ಲಿಗೆ ಬಂದ ವರದಿಗಳು ತಿಳಿಸಿವೆ.ವಿಶ್ವ ರ‌್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ದೀಪಿಕಾ ಮುಂದಿನ ಸುತ್ತಿನ ಪಂದ್ಯದಲ್ಲಿ ವಿಶ್ವದ ಎರಡನೇ ರ‌್ಯಾಂಕ್‌ನ ಆಟಗಾರ್ತಿ ಈಜಿಪ್ಟ್‌ನ ರನೀಮ್ ಎಲ್ ವೆಲೆಲಿ ಅವರ ಸವಾಲನ್ನು ಎದುರಿಸುವರು. ಇವರಿಬ್ಬರು ಈ ಹಿಂದೆ ಎರಡು ಸಲ ಪರಸ್ಪರ ಎದುರಾಗಿದ್ದು, ಈಜಿಪ್ಟ್‌ನ ಆಟಗಾರ್ತಿ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry