ಸ್ಕ್ವಾಷ್: ಫೈನಲ್‌ಗೆ ಭಾರತ

7

ಸ್ಕ್ವಾಷ್: ಫೈನಲ್‌ಗೆ ಭಾರತ

Published:
Updated:

ಚೆನ್ನೈ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಚೆನ್ನೈ ಓಪನ್ ಜೂನಿಯರ್ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದಾರೆ. ಭಾರತ ಸೆಮಿಫೈನಲ್‌ನಲ್ಲಿ 2-1ರಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿದರು.ಆತಿಥೇಯ ತಂಡದ ರಮಿತ್ ಟಂಡನ್ ನಿರ್ಣಾಯಕ ಪಂದ್ಯದಲ್ಲಿ 11-5, 6-11, 11-2, 14-12 ರಲ್ಲಿ ಜೆಫ್ರಿ ಡೆಮಾಂಟ್ ಅವರನ್ನು ಸೋಲಿಸಿದರು.ಇದಕ್ಕೂ ಮೊದಲು ದೀಪಿಕಾ ಪಳ್ಳಿಕಲ್ ಅವರು 11-3, 11-3, 11-5ರಲ್ಲಿ ಚ್ಲೊಯೆ ಮೆಸಿಕ್ ಅವರನ್ನು ಸುಲಭವಾಗಿ ಪರಾಭವ ಗೊಳಿಸಿದ್ದರು.ಆದರೆ ಎರಡನೇ ಪಂದ್ಯದಲ್ಲಿ ರವಿ ದೀಕ್ಷಿತ್ 6-11, 11-6, 6-11, 7-11ರಲ್ಲಿ ಲುಕಾಸ್ ಎದುರು ಸೋಲು ಕಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry