ಗುರುವಾರ , ಮೇ 13, 2021
44 °C

ಸ್ಕ್ವಾಷ್: ಭಾರತ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ತಂಡದವರು ಫ್ರಾನ್ಸ್‌ನ ಮುಲ್‌ಹೌಸ್‌ನಲ್ಲಿ ನಡೆಯುತ್ತಿರುವ ವಿಶ್ವ ಸ್ಕ್ವಾಷ್ ಚಾಂಪಿಯನ್‌ಷಿಪ್‌ನ ಪುರುಷರ ತಂಡ ವಿಭಾಗದ ತಮ್ಮ ಮೊದಲ ಪಂದ್ಯದಲ್ಲಿ  2-1ರಿಂದ ಅರ್ಜೆಂಟೀನಾ ತಂಡವನ್ನು ಮಣಿಸಿದ್ದಾರೆ.99 ನಿಮಿಷಗಳ ಕಾಲ ನಡೆದ ಆಟದಲ್ಲಿ ರಾಬರ್ಟಿನೊ ಪೆಜೋಟಾ ಅವರು, 11-9, 2-11, 6-11, 13-11, 11-6 ರಲ್ಲಿ ಭಾರತದ ಹರಿಂದ್ರಪಾಲ್ ಸಂಧು ಅವರನ್ನು ಸೋಲಿಸಿದರು. ಆದರೆ ಹೆರ್ನಾನ್ ಡಿ'ಅರ್ಕಾಲೆಂಗೊ ಅವರನ್ನು 11-7,11-8,11-2ರಲ್ಲಿ ಪರಾಭವಗೊಳಿಸಿ ಸೌರವ್ ಘೋಸಾಲ್ ಸಮಬಲ ಸಾಧಿಸಿದರು.ಬಳಿಕ ಮಹೇಶ್ ಮಂಗಾಂವ್ಕರ್, 8-11,11-5,11-6,11-8ರಲ್ಲಿ ಲಿಯಾಂಡ್ರೊ ರೊಮಿಗ್ಲಿಯೊ ಅವರನ್ನು ಸೋಲಿಸಿ ಭಾರತದ ಗೆಲುವಿಗೆ ಕಾರಣರಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.