ಶನಿವಾರ, ಏಪ್ರಿಲ್ 10, 2021
29 °C

ಸ್ಕ್ವಾಷ್: ಮಹೇಶ್, ಅನಕಾಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೋಹಾ (ಐಎಎನ್‌ಎಸ್): ಭಾರತದ ಮಹೇಶ್ ಮನಗಾಂವ್ಕರ್ ಹಾಗೂ ಅನಕಾ ಅಲಂಕಮೊನಿ ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡರು.ಈಜಿಪ್ಟ್‌ನ ಎರಡನೆ ಶ್ರೇಯಾಂಕದ ಆಟಗಾರ ಮಹಮ್ಮದ್ ಅಬುಯೆಲ್‌ಗರ್ 10-12, 8-11, 11-9, 12-10, 12-10ರಲ್ಲಿ  ಮಹೇಶ್‌ಗೆ ಸೋಲುಣಿಸಿದರು. ಇದಕ್ಕಾಗಿ 90 ನಿಮಿಷ ಹೋರಾಟ ನಡೆಸಿದರು.ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಕೇವಲ 37 ನಿಮಿಷದಲ್ಲಿ ಹೋರಾಟ ಕೊನೆಗೊಳಿಸಿದ ಅನಕಾ 4-11, 8-11, 11-5, 9-11ರಲ್ಲಿ ಯಾತಾರಿಬ್ ಅದೆಲ್ ಎದುರು ಶರಣಾದರು. ಸಮರ್ಥ ಪ್ರದರ್ಶನ ನೀಡುವಲ್ಲಿ ವಿಫಲವಾದ ಅನಕಾಗೆ ಒಂದು ಸೆಟ್‌ನಲ್ಲಿ ಮಾತ್ರ ಗೆಲುವು ಸಾಧ್ಯವಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.