ಸ್ಟಿವರ್ಟ್ ವಾಂಛೆ

7

ಸ್ಟಿವರ್ಟ್ ವಾಂಛೆ

Published:
Updated:

ನನಗೀಗ ಪ್ರಣಯ ದೃಶ್ಯಗಳಲ್ಲಿ ನಟಿಸುವ ವಾಂಛೆ ಹುಟ್ಟಿದೆ ಎನ್ನುತ್ತಿದ್ದಾರೆ ಹಾಲಿವುಡ್ ನಟಿ ಕ್ರಿಸ್ಟನ್ ಸ್ಟಿವರ್ಟ್.ಕ್ರಿಸ್ಟಿನ್‌ಳ ಮುಂದಿನ ಸಿನಿಮಾ `ಆನ್ ದಿ ರೋಡ್~ಗಾಗಿ ಆಕೆ ಪ್ರಣಯ ದೃಶ್ಯಗಳಲ್ಲಿ ಭಾಗವಹಿಸಿದ ನಂತರ ಅವರು ಹೀಗೆ ಹೇಳಿಕೊಂಡಿದ್ದಾರೆ. `ಹೌದು. ನಾನು ಪ್ರಚೋದಿಸುವುದನ್ನು ಇಷ್ಟಪಡುತ್ತೇನೆ. ನಾನು ದಿಗಿಲು ಬೀಳುವುದರ ಜತೆಗೆ ಮತ್ತೊಬ್ಬರಲ್ಲಿ ಸಣ್ಣಗೆ ಗಾಬರಿ ಹುಟ್ಟಿಸುವುದನ್ನು ನಾನು ಇಷ್ಟಪಡುತ್ತೇನೆ. ನನಗೀಗ ಪ್ರಣಯ ದೃಶ್ಯಗಳಲ್ಲಿ, ಕಾಮವನ್ನು ಬಡಿದೆಬ್ಬಿಸುವ ಸನ್ನಿವೇಶಗಳಲ್ಲಿ  ನನ್ನನ್ನು ತೆರೆದುಕೊಳ್ಳಬೇಕು ಎಂದು ತೀವ್ರವಾಗಿ ಅನಿಸುತ್ತಿದೆ.

 

ಪಾತ್ರವನ್ನು ತುಂಬಾ ಉತ್ಕಟತೆಯಿಂದ ಪ್ರೀತಿಸಿ ಪ್ರಾಮಾಣಿಕವಾಗಿ ನಟಿಸಬೇಕು. ಆಗ ಮಾತ್ರ ನಾವು ಮಾಡುವ ಯಾವುದೇ ಪಾತ್ರ ನಮ್ಮಳಗೆ ಅಸಹ್ಯ ಭಾವ ತರುವುದಿಲ್ಲ~ ಎಂಬುದು 22 ವರ್ಷದ ಸ್ಟಿವರ್ಟ್ ಮಾತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry