ಸ್ಟೀವ್ ಜಾಬ್ಸ್ ಅಂತ್ಯಸಂಸ್ಕಾರ

7

ಸ್ಟೀವ್ ಜಾಬ್ಸ್ ಅಂತ್ಯಸಂಸ್ಕಾರ

Published:
Updated:

ನ್ಯೂಯಾರ್ಕ್ (ಪಿಟಿಐ): ಕ್ಯಾನ್ಸರ್‌ನಿಂದ ಇತ್ತೀಚೆಗೆ ಮೃತಪಟ್ಟ ಆ್ಯಪಲ್ ಕಂಪೆನಿಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಅಂತ್ಯಸಂಸ್ಕಾರ ಶುಕ್ರವಾರ ಖಾಸಗಿಯಾಗಿ ನೆರವೇರಿತು ಎಂದು ಮಾಧ್ಯಮ ವರದಿ ತಿಳಿಸಿದೆ.`ಅದೊಂದು ಸಣ್ಣ ಕಾರ್ಯಕ್ರಮವಾಗಿತ್ತು~ ಎಂದು ಜಾಬ್ಸ್ ಕುಟುಂಬಕ್ಕೆ ಆಪ್ತರಾದ ವ್ಯಕ್ತಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ `ವಾಲ್‌ಸ್ಟ್ರೀಟ್ ಜರ್ನಲ್~ ವರದಿ ಮಾಡಿದೆ.ಆದರೆ ಆ ವ್ಯಕ್ತಿ ಜಾಬ್ಸ್ ಕುಟುಂಬದ ಖಾಸಗಿತನ ಕಾಪಾಡುವ ಸಲುವಾಗಿ, ಅಂತ್ಯಸಂಸ್ಕಾರ ನಡೆದ ಸ್ಥಳ ಮತ್ತು ಸಮಯ ಬಹಿರಂಗಪಡಿಸಿಲ್ಲ.`ಜಾಬ್ಸ್ ಅವರ ಅಸಾಮಾನ್ಯ ಜೀವನಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಯೋಜನೆಯೊಂದನ್ನು ರೂಪಿಸಲಿದ್ದೇವೆ~ ಎಂದು ಆ್ಯಪಲ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಟಿಮ್ ಕುಕ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry