ಸ್ಟ್ರಾಸ್‌ಕಾನ್ ಲೈಂಗಿಕ ಹಗರಣ: ರಾಜಿ

7

ಸ್ಟ್ರಾಸ್‌ಕಾನ್ ಲೈಂಗಿಕ ಹಗರಣ: ರಾಜಿ

Published:
Updated:

ನ್ಯೂಯಾರ್ಕ್ (ಪಿಟಿಐ): ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮಾಜಿ ಮುಖ್ಯಸ್ಥ ಡಾಮಿನಿಕ್ ಸ್ಟ್ರಾಸ್‌ಕಾನ್ ಹೋಟೆಲ್‌ವೊಂದರ ಪರಿಚಾರಿಕೆ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಲಾಗಿದ್ದು, ಈ ಬಗ್ಗೆ ಇಲ್ಲಿಯ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.ಇಲ್ಲಿಯ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಉದ್ಯೋಗಿಯಾಗಿರುವ 33 ವರ್ಷದ ನಫಿಸ್ಸಾಟು ಡಿಲೊ ಕೋಣೆ ಸ್ವಚ್ಛಗೊಳಿಸಲು ತೆರಳಿರುವ ಸಂದರ್ಭ ಆ ಕೋಣೆಯಲ್ಲಿ ತಂಗಿದ್ದ ಸ್ಟ್ರಾಸ್‌ಕಾನ್  ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಕಳೆದ ವರ್ಷ ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಪ್ರತಿಯಾಗಿ ಸ್ಟ್ರಾಸ್‌ಕಾನ್ ಸಹ ಡಿಲೊ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.ವಿಚಾರಣೆ ನಡೆಸಿದ ಕೋರ್ಟ್ `ಹಣ ನೀಡುತ್ತೇನೆ. ಆದರೆ ಪ್ರಮಾಣ ಬಹಿರಂಗಗೊಳಿಸುವುದಿಲ್ಲ ಎಂದು ಸ್ಟ್ರಾಸ್‌ಕಾನ್ ತಿಳಿಸಿದ ಬಳಿಕ ಇಬ್ಬರೂ ಪರಸ್ಪರ ರಾಜಿಗೆ ಮುಂದಾಗಿದ್ದರಿಂದ ಇದನ್ನು ಗೌಪ್ಯ ಪ್ರಕರಣ ಎಂದು ನಿರ್ಧರಿಸಿ ಪ್ರಕರಣ ಇತ್ಯರ್ಥಗೊಳಿಸಲಾಗಿದೆ' ಎಂದು ತೀರ್ಪು ನೀಡಿದೆ.

ತೀರ್ಪು ನೀಡುವ ಸಂದರ್ಭ ಸ್ಟ್ರಾಸ್‌ಕಾನ್ ಹಾಜರಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry