ಶನಿವಾರ, ಮೇ 21, 2022
25 °C

ಸ್ತನ ಕ್ಯಾನ್ಸರ್‌ಗೂ ಹೋಮಿಯೋಪಥಿ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಯುರ್ವೇದ, ಅಲೋಪಥಿ ಔಷಧಿ ಚಿಕಿತ್ಸೆಯ ಹೊರತಾಗಿ ಇಂದು ಹೋಮಿಯೋಪಥಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ.ಬೆನ್ನುನೋವು, ಕೀಲು ನೋವು, ಮೊಣಕಾಲು ನೋವು ಸೇರಿದಂತೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಅಲ್ಲದೇ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತಿರುವ ಸ್ತನ ಕ್ಯಾನ್ಸರ್ ಹಾಗೂ ಗರ್ಭ ಕೊರಳು ಕ್ಯಾನ್ಸರ್‌ಗೂ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆ ಬಗ್ಗೆ ಶಿಕ್ಷಣದ ಕೊರತೆ ನಮ್ಮ ಜನರಲ್ಲಿದೆ ಎಂಬುದು ಹೋಮಿಯೋಪಥಿ ವೈದ್ಯರ ಅಭಿಪ್ರಾಯ.ಇಂದಿರಾನಗರದಲ್ಲಿ `ಹೋಮಿಯೋಕೇರ್ ಇಂಟರ್ ನ್ಯಾಷನಲ್' ಸಂಸ್ಥೆಯ 26ನೇ ಶಾಖೆ ಉದ್ಘಾಟನೆ ಮಾಡಿದ ಅಧ್ಯಕ್ಷ ಡಾ.ಶ್ರೀಕಾಂತ್ ಮಾರ್ಲವಾರ್ ಈ ಮಾಹಿತಿಯನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು. “ಇಪ್ಪತ್ತು ವರ್ಷಗಳ ಹಿಂದೆ ಇದ್ದ ಜನರ ಆರೋಗ್ಯಕ್ಕೂ ಇವತ್ತಿಗೂ ಅಜಗಜಾಂತರ. ಇಂದು 12 ವರ್ಷದ ಮಕ್ಕಳಲ್ಲೂ ಬೆನ್ನುನೋವು ಕಂಡುಬರುತ್ತಿದೆ. 35 ವರ್ಷಗಳಿಂದಲೂ ಅನೇಕ ಸಂಶೋಧನೆಗಳನ್ನು ಈ ಕ್ಷೇತ್ರದಲ್ಲಿ ನಡೆಸಲಾಗುತ್ತಿದೆ. ಅಂಗಾಂಗಗಳನ್ನು ಪ್ರಚೋದಿಸುವ ಹಾರ್ಮೋನ್‌ಗಳ ತೊಂದರೆ, ಥೈರಾಯಿಡ್, ಬೆನ್ನುನೋವು, ಮಧುಮೇಹ, ಮಹಿಳಾ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಅವುಗಳಿಗೆ ನಮ್ಮಲ್ಲಿ `ಕಾನ್‌ಸ್ಟಿಟ್ಯೂಷನಲ್ ಜೀನ್ ಥೆರಪಿ' ಮೂಲಕ ಚಿಕಿತ್ಸೆ ನೀಡಲಾಗುತ್ತದೆ” ಎನ್ನುತ್ತಾರೆ ಅವರು.ರಾಜ್ಯದಲ್ಲಿ ಆರು ಶಾಖೆಗಳನ್ನು ಹೊಂದಿರುವ ಹೋಮಿಯೋಕೇರ್ ಇಂಟರ್‌ನ್ಯಾಷನಲ್ ಸಂಸ್ಥೆಯು ಜಯನಗರ ಹಾಗೂ ಮಲ್ಲೇಶ್ವರದಲ್ಲೂ ಶಾಖೆಗಳನ್ನು ಹೊಂದಿದ್ದು, ಇದೀಗ ಇಂದಿರಾನಗರದಲ್ಲಿ ಮೂರನೇ ಶಾಖೆ ಆರಂಭಿಸಿದೆ.ಸಂಸ್ಥೆಯಲ್ಲಿ 300ಕ್ಕೂ ಹೆಚ್ಚು ವೈದ್ಯರಿದ್ದು, ಹಾರ್ಮೋನ್ ಸಂಬಂಧಿ ಕಾಯಿಲೆಗಳಿಗಾಗಿ `ಹಾರ್ಮೋನ್ ಸೆಲ್' ಆರಂಭಿಸಿದ್ದಾರೆ. ಇಲ್ಲಿ ಮಹಿಳಾ ಸಂಬಂಧಿ ಕಾಯಿಲೆ, ಸ್ಥೂಲಕಾಯ, ಮಧುಮೇಹ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬಹುದು. ಹೊಸದಾಗಿ ಆರಂಭವಾದ ಕೇಂದ್ರದಲ್ಲಿ ಮೊದಲ ಮೂರು ವಾರ ಚಿಕಿತ್ಸೆಗೆ ಬರುವವರಿಗೆ  ಶೇ 30 ರಿಯಾಯಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.ಆನ್‌ಲೈನ್ ಆಪ್ತ ಸಮಾಲೋಚನೆ

ಆಸ್ಪತ್ರೆಗೆ ಬಾರದೇ ಮನೆ ಅಥವಾ ಕಚೇರಿಗಳಿಂದಲೇ ವೈದ್ಯರೊಂದಿಗೆ ಆಪ್ತ ಸಮಾಲೋಚನೆ ನಡೆಸುವವರಿಗಾಗಿ ಆನ್‌ಲೈನ್ ಆಪ್ತಸಮಾಲೋಚನಾ ವೆಬ್‌ಸೈಟ್ www.onlinehomeocare.com   ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ನಟಿ ಅನಿತಾ ಭಟ್ ಉಪಸ್ಥಿತರಿದ್ದರು.ಹೋಮಿಯೋಪಥಿ ಜರ್ಮನಿಯಿಂದ ಬಂದ ಚಿಕಿತ್ಸಾ ವಿಧಾನ. ಡಾ.ಸಾಮ್ಯುಯಲ್ ಹೆನೆಮನ್ ಅವರು ಹೋಮಿಯೋಪಥಿ ಪಿತಾಮಹ. ಇದು ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಔಷಧಿ ಮೂಲಕ ಗುಣಪಡಿಸುವ ವಿಧಾನವಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.