ಭಾನುವಾರ, ಜೂನ್ 20, 2021
20 °C

ಸ್ತನ ಕ್ಯಾನ್ಸರ್‌ ತಡೆಗೆ ದೈಹಿಕ ಚಟುವಟಿಕೆ ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ (ಪಿಟಿಐ): ಮಹಿಳೆಯರು ದಿನ­ದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಕ್ರೀಡಾ­ಭ್ಯಾಸದಲ್ಲಿ ತೊಡಗುವುದರಿಂದ ಸ್ತನ ಕ್ಯಾನ್ಸರ್‌ ಅಪಾಯದಿಂದ ಪಾರಾ­ಗ­ಹುದು ಎನ್ನುತ್ತದೆ ಹೊಸ ಅಧ್ಯಯನ !ಈ ಬಗ್ಗೆ ಸಂಶೋಧನೆ ನಡೆಸಿರುವ ಅಂತರ­ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ಸಂಶೋಧನಾ ವಿಭಾಗದ ನಿರ್ದೇಶಕಿ ಪ್ರೊ.ಮ್ಯಾಥೀವ್‌ ಬೋನಿ­ಯಲ್‌ ಅವರು ‘ದೈಹಿಕ ಚಟುವ­ಟಿಕೆ­ಗಳಲ್ಲಿ ಕಡಿಮೆ ಕ್ರಿಯಾಶೀಲ­ರಾಗಿ­ರುವ ಮಹಿಳೆಯರಿಗಿಂತ ಹೆಚ್ಚು ಕ್ರಿಯಾ­ಶೀಲ­ರಾಗಿರುವವರಲ್ಲಿ ಸ್ತನ ಕ್ಯಾನ್ಸರಿನ ಅಪಾಯ ಶೇಕಡಾ 12ರಷ್ಟು ಕಡಿಮೆ’ ಎಂದಿದ್ದಾರೆ.‘ಚಿಕ್ಕ ವಯಸ್ಸಿನಿಂದಲೇ ದೈಹಿಕ ಚಟು­ವಟಿಕೆ­ಗಳಲ್ಲಿ ತೊಡಗಿಕೊಳ್ಳುವುದರಿಂದ ಸ್ತನ ಕ್ಯಾನ್ಸರಿನ ಅಪಾಯದಿಂದ ಪಾರಾ­ಗಬಹುದು.  ಈಗಲೂ ದೈಹಿಕ ಚಟುವ­ಟಿಕೆಗಳಲ್ಲಿ ತೊಡಗುವ ಯಾವುದೇ ವಯಸ್ಸಿನ ಮತ್ತು ತೂಕದ ಮಹಿಳೆಗೆ ಇದು ಅನ್ವಯವಾಗಲಿದೆ’ ಎಂದು ಅವರು ವಿವರಿಸಿದ್ದಾರೆ.ಅಲ್ಲದೇ 1987 ರಿಂದ 2013­ರವರೆಗೆ ಈ ಸಂಬಂಧ ಪ್ರಕಟವಾಗಿರುವ 37 ಅಧ್ಯಯನಗಳ ವರದಿಗಳೂ ಇದೇ ಅಂಶವನ್ನು ಪುಷ್ಟೀಕರಿಸಿವೆ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.