ಸೋಮವಾರ, ಜೂನ್ 14, 2021
22 °C

ಸ್ತನ ಕ್ಯಾನ್ಸರ್ ಅರಿವಿಗೆ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳೆಯರನ್ನು ಕಾಡುತ್ತಿರುವ ಸ್ತನ ಕ್ಯಾನ್ಸರ್ ಸಮಸ್ಯೆ, ಲಭ್ಯವಿರುವ ಚಿಕಿತ್ಸೆ ಮತ್ತು ಪುನರ್ವಸತಿ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಡಿ.ಎಸ್. ರಿಸರ್ಚ್ ಸೆಂಟರ್ ಮಹಿಳಾ ದಿನದಂದು ವಿಶೇಷ ಶಿಬಿರವನ್ನು ಹಮ್ಮಿಕೊಂಡಿದೆ.

ಸ್ತನ ಕ್ಯಾನ್ಸರ್ ಸಮಸ್ಯೆ ಕುರಿತು ತಿಳಿದುಕೊಳ್ಳಲು ಉಚಿತ ಶಿಬಿರದ ಅವಕಾಶವನ್ನು ನೀಡಿದೆ. ಮಾರ್ಚ್ 8 ರಂದು ಶಿಬಿರ ನಡೆಯಲಿದ್ದು, ಸ್ತನ ಕ್ಯಾನ್ಸರ್ ಭಯಪಡುವ ಗಂಭೀರ ಸಮಸ್ಯೆಯಲ್ಲ, ಅದರ ವಿರುದ್ಧ ಹೋರಾಡಲು ಸಾಧ್ಯವಿದೆ. ಈ ಕುರಿತು ಸ್ವಲ್ಪ ಜಾಗೃತಿ ವಹಿಸಿದರೆ ಸಮಸ್ಯೆಯನ್ನು ತಡೆಯಲು ಮತ್ತು ನಿವಾರಿಸಿಕೊಳ್ಳಲು ಸುಲಭ, ಇದೇ ಶಿಬಿರದ ಮೂಲ ಉದ್ದೇಶ ಎಂದಿದೆ ಡಿ.ಎಸ್.ರಿಸರ್ಚ್ ಸೆಂಟರ್.

ಶಿಬಿರವು ಬೆಳಿಗ್ಗೆ 9 ಗಂಟೆಗೆ ಡಿ.ಎಸ್. ರಿಸರ್ಚ್ ಸೆಂಟರ್, ನಂ.53, ಶಿರಡಿ ಸಾಯಿ ಮಂದಿರ್ ರಸ್ತೆ, ಕೇಂಬ್ರಿಡ್ಜ್ ಬಡಾವಣೆ, ಇಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ: 080-43414141.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.