ಸ್ತನ ಕ್ಯಾನ್ಸರ್ ಜಾಗೃತಿ

7

ಸ್ತನ ಕ್ಯಾನ್ಸರ್ ಜಾಗೃತಿ

Published:
Updated:

ಅಪೊಲೊ ವಿಚಾರ ಸಂಕಿರಣ

ಸ್ತನ ಕ್ಯಾನ್ಸರ್ ಜಾಗತಿ ಮಾಸದ ಅಂಗವಾಗಿ ಅಪೊಲೊ ಹಾಸ್ಪಿಟಲ್ಸ್ ಶನಿವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರ ವರೆಗೆ ಸಂಪೂರ್ಣ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸುತ್ತಿದೆ.

ಸ್ತನ ಕ್ಯಾನ್ಸರ್ ಭಾರತದಲ್ಲಿ ಆತಂಕಕಾರಿ ಮಟ್ಟದಲ್ಲಿ ಹರಡುತ್ತಿದೆ.ಮಹಿಳೆಯರ ಎಲ್ಲಾ ಕ್ಯಾನ್ಸರ್‌ಗಳ ಪೈಕಿ ಇದರ ಪ್ರಮಾಣ ಶೇ 30ರಷ್ಟು . ಈ ಹಿನ್ನೆಲೆಯಲ್ಲಿ ಸ್ತನದ ಸ್ವಯಂ ಪರೀಕ್ಷೆ, ಕಾಯಿಲೆ ವಿರುದ್ಧ ಮುಂಜಾಗೃತೆ, ಚಿಕಿತ್ಸೆ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುವುದು. ಇದೇ ಸಂದರ್ಭದಲ್ಲಿ ನಡೆಯುವ ಕಾರ್ಯಾಗಾರದಲ್ಲಿ ನುರಿತ ತಜ್ಞರು ಪಾಲ್ಗೊಳ್ಳುವರು.ಸ್ಥಳ: ಅಪೊಲೊ ಹಾಸ್ಪಿಟಲ್ಸ್, ಬನ್ನೇರುಘಟ್ಟ ರಸ್ತೆ. ಪ್ರವೇಶ ಉಚಿತ. ಮಾಹಿತಿಗೆ: 6060 1066.ಪಾಂಡ್ಸ್ ತಪಾಸಣೆ

ಸೌಂದರ್ಯ ಪ್ರಸಾಧನಗಳಿಗೆ ಹೆಸರಾದ ಪಾಂಡ್ಸ್, `ಪಾಂಡ್ಸ್ ಲೆಟ್ಸ್ ಪಿಂಕ್~ ಅಭಿಯಾನದ ಅಂಗವಾಗಿ ಅ. 24ರವರೆಗೆ ನಗರದ ಆಯ್ದ ಆಸ್ಪತ್ರೆಗಳಲ್ಲಿ  ಮಹಿಳೆಯರಿಗೆ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಸೌಲಭ್ಯ ಕಲ್ಪಿಸಿದೆ.ಕಿದ್ವಾಯಿ ಆಸ್ಪತ್ರೆ (ಡಾ. ಕೆ.ಸಿ. ಲಕ್ಷ್ಮಣ್- 94480 55949, ಡಾ. ಡಿ. ಲೋಕನಾಥ್- 80265 79503, ಡಾ. ಸಿದ್ದಣ್ಣ ಪಲ್ಲಾಡ್- 99806 66727, ಡಾ. ಕೆ.ಪಿ. ಆರ್ ಪ್ರಮೋದ್- 80260 94042), ಅಪೊಲೊ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ (ಡಾ. ಸಿ. ಎನ್. ಪಾಟೀಲ್- 80267 24188), ಸ್ಪೆಷಾಲಿಟಿ ಕ್ಲಿನಿಕ್, ಪ್ರೊಮನೇಡ್ ರಸ್ತೆ, ಕೋಲ್ಸ್‌ಪಾರ್ಕ್ ಸಮೀಪ (ಡಾ. ಸಯ್ಯದ್ ಅಲ್ತಾಫ್- 80253 02655, ಡಾ. ಕೆ. ಶೋಭಾ- 98458 80095), ಅಪೊಲೊ ಆಸ್ಪತ್ರೆ (ಡಾ. ಗಣೇಶ್ ದೇವ್ ವಸಿಷ್ಠ- 99725 99314), ಹೆಲ್ತ್‌ಕೇರ್ ಗ್ಲೋಬಲ್ ಹಾಸ್ಪಿಟಲ್, ಎಚ್‌ಸಿಜಿ ಟವರ್ಸ್‌, ಪಿ. ಕಾಳಿಂಗ ರಾವ್ ರಸ್ತೆ, ಸಂಪಂಗಿ ರಾಮ ನಗರ (ಡಾ. ರಾಧೆಶ್ಯಾಮ ನಾಯ್ಕ- 97313 10682, ಡಾ. ಸಿ.ಟಿ. ಸತೀಶ್- 80958 56088), ಬಿಜಿಎಸ್ ಗ್ಲೋಬಲ್ ಆಸ್ಪತ್ರೆ (ಡಾ. ಎಸ್. ಬಾಬು- 93432 62589), ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಯಶವಂತಪುರ (ಡಾ, ನೀಲೇಶ್ ರೆಡ್ಡಿ- 98453 24463), ಎಂ.ಎಸ್. ರಾಮಯ್ಯ ಆಸ್ಪತ್ರೆ (ಡಾ. ಕೀರ್ತಿ ಕೌಶಿಕ್- 99018 45412).ಎಚ್‌ಸಿಜಿಯಿಂದ ರಿಬ್ಬನ್

ದಕ್ಷಿಣ ಏಷ್ಯಾದ ಪ್ರಮುಖ ಕ್ಯಾನ್ಸರ್ ಕೇರ್ ನೆಟ್‌ವರ್ಕ್ `ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್~ (ಹೆಚ್‌ಸಿಜಿ), ಜನರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಅ.30ರಂದು ಬೆಂಗಳೂರಿನ ಎಂ ಜಿ ರಸ್ತೆಯ ಸಲೀವಾನ್ ಪೊಲೀಸ್ ಗ್ರೌಂಡ್ಸ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ವಿಶ್ವದ ಅತಿ ದೊಡ್ಡ ಮಾನವ ನಿರ್ಮಿತ ರಿಬ್ಬನ್ ರೂಪಿಸಲಿದೆ.  ಈ ರಿಬ್ಬನ್ ಗಿನ್ನಿಸ್ ವಿಶ್ವ ದಾಖಲೆ ಮತ್ತು ಲಿಮ್ಕೋ ಬುಕ್ ಆಫ್ ರೆರ್ಕಾಡ್ಸ್‌ನಲ್ಲಿ ಸೇರ್ಪಡೆಯಾಗುವಷ್ಟು ದೊಡ್ಡದಾಗಿರುತ್ತದೆ. ಬೆಂಗಳೂರಿನ 5000 ನಾಗರಿಕರು ಸೇರಿ ಈ ರಿಬ್ಬನ್ ರೂಪಿಸಲಿದ್ದಾರೆ.ಇದರಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು  www.hcgoncology.com ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.   

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry