ಸ್ತನ ಕ್ಯಾನ್ಸರ್ ತಡೆಗೆ ಬರಲಿದೆ ಜಾಣ ಕಂಚುಕ

7

ಸ್ತನ ಕ್ಯಾನ್ಸರ್ ತಡೆಗೆ ಬರಲಿದೆ ಜಾಣ ಕಂಚುಕ

Published:
Updated:

ವಾಷಿಂಗ್ಟನ್ (ಪಿಟಿಐ): `ಸ್ತನ ಕ್ಯಾನ್ಸರ್~ ಅನ್ನು ಆರಂಭದಲ್ಲೇ ಪತ್ತೆಹಚ್ಚುವಂತಹ ಸ್ಮಾರ್ಟ್ ಬ್ರಾಗಳನ್ನು ಅಮೆರಿಕದ ಕಂಪೆನಿಯೊಂದು ಸಿದ್ಧಪಡಿಸಿದೆ.ಅಮೆರಿಕದ `ಫಸ್ಟ್ ವಾರ್ನಿಂಗ್ ಸಿಸ್ಟಮ್ಸ~ ಎಂಬ ಕಂಪೆನಿ ಈ `ಸಂವೇದಿ ಬ್ರಾ~ ಕಂಡುಹಿಡಿದಿದೆ.

ಮಹಿಳೆಯರು ತಮ್ಮ ಸ್ತನ ಕವಚದಲ್ಲಿ ಈ ಸಾಧನವನ್ನು ಇಟ್ಟುಕೊಂಡಾಗ ಸ್ತನ ಕ್ಯಾನ್ಸರ್ ಬರುವ ಮುನ್ಸೂಚನೆಯನ್ನು ಆರಂಭದಲ್ಲೇ ಪತ್ತೆ ಮಾಡಲು ಇದು ನೆರವಾಗಲಿದೆ.ಸಾಫ್ಟ್‌ವೇರ್ ವ್ಯವಸ್ಥೆ ಹೊಂದಿರುವ ಈ ಸಾಧನವು ಇತರೆ ಸ್ತನ ಕ್ಯಾನ್ಸರ್ ಚಿಕಿತ್ಸಾ ವಿಧಾನಗಳಿಂದ ರೋಗಿಗಳು ಅನುಭವಿಸುತ್ತಿದ್ದ ಇರುಸುಮುರುಸು, ವಿಕಿರಣಗಳ ಹೊರಸೂಸುವಿಕೆಯ ಭಯ ಹಾಗೂ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲಿದೆ. 2013ನೇ ಇಸ್ವಿ ಹೊತ್ತಿಗೆ ಇದನ್ನು ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ಕಂಪೆನಿ ಹೇಳಿದೆ.ಸದ್ಯ ಸ್ತನ ಕ್ಯಾನ್ಸರ್ ಪತ್ತೆಹಚ್ಚಿ ಚಿಕಿತ್ಸೆ ನೀಡಲು ಅತ್ಯುನ್ನತ ತ್ರಿಡಿ ತಂತ್ರಜ್ಞಾನದ ಮಮೊಗ್ರಫಿ (ಸ್ತನ ರೇಖನ) ಮತ್ತು ಥರ್ಮೊಗ್ರಫಿ  (ಉಷ್ಣಲೇಖನ) ವಿಧಾನಗಳು ಬಳಕೆಯಲ್ಲಿದ್ದು, ಈ ಸಾಮಾನ್ಯ ಚಿಕಿತ್ಸಾ ವಿಧಾನಗಳ ಬಗ್ಗೆ ರೋಗಿಗಳಿಗೆ ಅಷ್ಟಾಗಿ ಭರವಸೆಯಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry