ಭಾನುವಾರ, ಏಪ್ರಿಲ್ 18, 2021
30 °C

ಸ್ತ್ರೀ ಶಿಕ್ಷಣ ಈ ಶತಮಾನದ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೆಣ್ಣು ಎಲ್ಲ ಬಂಧನಗಳನ್ನು ಬದಿಗೊತ್ತಿ ಮುಖ್ಯ ವೇದಿಕೆಗೆ ಬಂದಿರುವುದು ಈ ಶತಮಾನದ ಅಭೂತಪೂರ್ವ ಬೆಳವಣಿಗೆ ಎಂದು ಸಾಹಿತಿ ಪ್ರೊ.ಶಿವರಾಜ ಪಾಟೀಲ ಹೇಳಿದರು.ನಗರದ ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಇಂದಿರಾ ಡ್ವಾಕ್ವಾ ಗ್ರೂಪ್ ಹಾಗೂ ಪಿಲ್ಲೂ ಹೋಮಿ ಇರಾಣಿ ಮಹಿಳಾ ಮಹಾವಿದ್ಯಾಲಯದ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡ ‘ಮಹಿಳೆ ಮತ್ತು ಶೈಕ್ಷಣಿಕ ಸ್ಥಿತಿಗತಿ’ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ಹೆಣ್ಣು ಏನೆಲ್ಲಾ ಸಾಧನೆ ಮಾಡಿದರೂ, ಕೌಟುಂಬಿಕ ನಿರ್ವಹಣೆ ಹೊರೆ ತಪ್ಪುತ್ತಿಲ್ಲ. ಎಲ್ಲ ಕ್ಕಿಂತ ಮಿಗಿಲಾಗಿ  ಮಹಿಳೆಗೆ ಧಾರ್ಮಿಕ ಸ್ವಾತಂತ್ರ್ಯ ನೀಡದೇ ಸಮಾಜ ಭಾರಿ ಲೋಪವೆಸಗಿದೆ ಎಂದರು. ಹೆಣ್ಣಿಗೆ ಸಮಾಜ ತಿದ್ದಬಲ್ಲ ಶಕ್ತಿ ಇರುವುದರಿಂದ ಶಿಕ್ಷಣ ಅಗತ್ಯ ಎಂದು ಅಭಿಪ್ರಾಯಪಟ್ಟರು.ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ.ಇಂದಿರಾ ಶಕ್ತಿ ಮಾತನಾಡಿ, ಶಿಕ್ಷಣ ಹೆಣ್ಣನ್ನು ಜಾಗೃತಿಗೊಳಿಸುತ್ತದೆ. ಶಿಕ್ಷಿತ ಸ್ತ್ರೀ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಕುರಿತು ಚಿಂತಿಸಬೇಕು. ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೆಣ್ಣಿನಲ್ಲಿದ್ದರೆ, ಅವಳು ಇಡೀ ಕುಟುಂಬವನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯಬಲ್ಲಳು ಎಂದರು.ಎಂ.ಆರ್.ಮೆಡಿಕಲ್ ಕಾಲೇಜ್‌ಗೆ ದೇಹ ದಾನ ಮಾಡಿದ ನೀಲಮ್ಮ ನಾಯ್ಕಲ್ ಅವರನ್ನು ಸನ್ಮಾನಿಸ ಲಾಯಿತು. ಕರ್ನಾಟಕ ಪೀಪಲ್ಸ್ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಮಾರುತಿರಾವ ಡಿ.ಮಾಲೆ ಅಧ್ಯಕ್ಷತೆ ವಹಿಸಿದ್ದರು. ಇರಾಣಿ ಕಾಲೇಜಿನ ಪ್ರಾಚಾರ್ಯೆ ಸೀತಾಬಾಯಿ ಎ.ಜಿ., ಗ್ರೂಪ್‌ನ ಅಧ್ಯಕ್ಷೆ ರಾಜಶ್ರೀ ಎಸ್.ದೇಶ ಮುಖ್, ಉಪನ್ಯಾಸಕಿ ಅಪರ್ಣಾ ಮಾಲೆ, ಸಂಯೋಜಕ ನಾಗಲಿಂಗಯ್ಯ ಮಠಪತಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.