ಸ್ತ್ರೀ ಸ್ವಾತಂತ್ರ್ಯ ಮರೀಚಿಕೆ: ವೀಣಾ ಹೂಗಾರ

ಗುರುವಾರ , ಜೂಲೈ 18, 2019
28 °C

ಸ್ತ್ರೀ ಸ್ವಾತಂತ್ರ್ಯ ಮರೀಚಿಕೆ: ವೀಣಾ ಹೂಗಾರ

Published:
Updated:

ಗದಗ: `ಪುರುಷ ಪ್ರಧಾನ ಕುಟುಂಬದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯ ಮರಿಚಿಕೆ ಯಾಗಿದೆ. ಎಂತಹ ಸಂದರ್ಭದಲ್ಲೂ ಅವಳು ಗುಲಾಮಳಾಗಿ ಬದುಕು ತ್ತಿದ್ದಾಳೆ~ ಎಂದು ಡಾ. ವೀಣಾ ಹೂಗಾರ ವಿಷಾದ ವ್ಯಕ್ತಪಡಿಸಿದರು.ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಡಾ. ಫ.ಗು ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್, ಪಂಚಾಕ್ಷರ ಪಟ್ಟಾಧ್ಯಕ್ಷರ ಜನಕಲ್ಯಾಣ ಪ್ರತಿಷ್ಠಾನ ಹಾಗೂ ವೀರೇಶ್ವರ ಪುಣ್ಯಾಶ್ರಮ ಸಹಯೋಗದಲ್ಲಿ ಹಳಕಟ್ಟಿ ವಚನೋತ್ಸವ-2011 ರಾಜ್ಯ ಮಟ್ಟದ 5ನೇ ಸಮ್ಮೇಳನ ಕಾರ್ಯಕ್ರಮದಲ್ಲಿ ನಡೆದ `ಸ್ತ್ರೀ ವಾದಿ ಚಳವಳಿ ವಚನಕಾರ್ತಿಯರು~ ಎಂಬ ಗೋಷ್ಠಿ ಯಲ್ಲಿ ಸ್ತ್ರೀ ಸ್ವಾತಂತ್ರ್ಯ ಮತ್ತು ವಚನಕಾರ್ತಿಯರು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.`ಮಹಿಳೆಯರ ಮೇಲೆ ಇಂದಿಗೂ ಶೋಷಣೆ ನಡೆಯುತ್ತಿದೆ. ಇದನ್ನು ಹೋಗಲಾಡಿಸಲು 12ನೇ ಶತಮಾನ ದಲ್ಲಿ ಅಕ್ಕಮಹಾದೇವಿ ವಚನಗಳ ಮೂಲಕ ಶೋಷಿತ ಮಹಿಳೆರ ಸಬಲೀಕರ ಣಕ್ಕೆ ಶ್ರಮಿಸಿದ್ದಾರೆ. ಅಕ್ಕಮಹಾ ದೇವಿಯ ಆದರ್ಶದ ಜೀವನವನ್ನು ಪ್ರಸ್ತುತ ಮಹಿಳೆಯರು ಅರಿತುಕೊಳ್ಳು ವದು ಸೂಕ್ತ~ ಎಂದರು.ಸಾಹಿತಿ ರುದ್ರಮ್ಮ ಹಾಸಿನಾಳ  `ವಚನಕಾರ್ತಿಯರು ಸಾಮಾಜಿಕ ಪರಿಕಲ್ಪನೆ~ ಕುರಿತು ಉಪನ್ಯಾಸ ನೀಡಿ, ವರದಕ್ಷಿಣೆ ಎಂಬ ದೊಡ್ಡ ಪಿಡುಗಿನಿಂದ ಸ್ತ್ರೀಯರನ್ನು ಹತ್ತಿಕ್ಕುವ ಸಮಾಜ ನಿರ್ಮಾಣವಾಗಿದೆ~ ಎಂದರು.ಸ್ತ್ರೀಯರು ರಚಿಸಿದ ವಚನಗಳು ಕೇವಲ ಮಹಿಳೆಗೆ ಮಾತ್ರ ಸೀಮಿತವಾಗಿಲ್ಲ. ಪುರುಷರಿಗೂ ಅನ್ವಯಿಸುತ್ತವೆ. ವಚನಗಳು ಜೀವನಕ್ಕೆ ತಾತ್ವಿಕ ವಿಚಾರಗಳನ್ನು ತಿಳಿಸುತ್ತವೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಆಧ್ಯಾತ್ಮಿಕ ಕೇಂದ್ರದ ನೀಲಮ್ಮತಾಯಿ ಅಸುಂಡಿ ಮಾತನಾಡಿ, `ಡಾ. ಫ.ಗು. ಹಳಕಟ್ಟಿ ಅವರು ಅಮೂಲ್ಯವಾದ ವಚನ ಸಂಪತ್ತನ್ನು ಶೋಧಿಸಿ, ಪ್ರಕಟಿಸಿ ನಮ್ಮ ವಚನ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ. ಅದನ್ನು ಕಾಪಾಡಿ ಕೊಂಡು ಹೋಗುವ ಜವಾಬ್ದಾರಿ ಇಂದಿನ ಪಿಳಿಗೆಯ ಮೇಲಿದೆ~ ಎಂದು ಹೇಳಿದರು.`ವಚನಗಳು ಜಗತ್ತನ್ನೆ ಬೆಳಗುವ ಶಕ್ತಿಯನ್ನು ಹೊಂದಿವೆ. ಭೌತಿಕ ಸಂಪತ್ತು ಮರೆಯಾಗುತ್ತದೆ ಆದರೆ, ವಚನ ಸಂಪತ್ತು ಎಂದೆಂದಿಗೂ ಮರೆಯಾಗಲು ಸಾಧ್ಯವಿಲ್ಲ~ ಎಂದು ತಿಳಿಸಿದರು.ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಗೊ.ರು. ಚನ್ನಬಸಪ್ಪ ಮತ್ತಿತರರು ಹಾಜರಿದ್ದರು. ಪ್ರೊ. ಶಕುಂತಲಾ ಸಿಂಧೂರ  ನಿರೂಪಿಸಿದರು. ಗೌರಕ್ಕ ಬಡಿಗಣ್ಣನವರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry