ಸ್ಥಳಾವಕಾಶಕ್ಕೆ ಆಗ್ರಹಿಸಿ ಆಟೋ ಸಂಚಾರ ಸ್ಥಗಿತ

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಸ್ಥಳಾವಕಾಶಕ್ಕೆ ಆಗ್ರಹಿಸಿ ಆಟೋ ಸಂಚಾರ ಸ್ಥಗಿತ

Published:
Updated:

ಚನ್ನಮ್ಮನ ಕಿತ್ತೂರು: ಆಟೋರಿಕ್ಷಾ ನಿಲುಗಡೆಗೆ ಸೂಕ್ತ ಸ್ಥಳದ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿ ರಾಣಿ ಚನ್ನಮ್ಮ ಅಟೋರಿಕ್ಷಾ ಮಾಲೀಕರು ಹಾಗೂ ಚಾಲಕರ ಸಂಘಟನೆ ಸದಸ್ಯರು ಪಟ್ಟಣದಲ್ಲಿ ಆಟೋ ಸಂಚಾರ ಸ್ಥಗಿತಗೊಳಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಬೆಳಿಗ್ಗೆ 11ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಬಳಿಯ ರಾಣಿ ಚನ್ನಮ್ಮ ಪ್ರತಿಮೆ ಹತ್ತಿರ ತಮ್ಮೆಲ್ಲ ಆಟೋಗಳ ಸಮೇತ ಅಲ್ಲಿಗೆ ಆಗಮಿಸಿ ಅವರು,  ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆಟೋಗಳ ಸಮೇತ ಊರಲ್ಲಿ ಮೆರವಣಿಗೆ ಮಾಡಲಾಯಿತು. ಆಟೋ ನಿಲ್ದಾಣಕ್ಕೆ ಸೂಕ್ತ ಸ್ಥಳ ನೀಡಬೇಕು ಎಂದು ಘೋಷಣೆ ಕೂಗಿದರು.ವಿಶೇಷ ತಹಸೀಲ್ದಾರ ಕಚೇರಿ ಮುಂದೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಆಟೋ ಸಂಘಟನೆ ಅಧ್ಯಕ್ಷ ವಿಜಯಕುಮಾರ ಶಿಂಧೆ, `1997ರಿಂದ ಪಟ್ಟಣದಲ್ಲಿ ಅಟೋ ಸೇವೆ ಪ್ರಾರಂಭ ಮಾಡಲಾಗಿದೆ. ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ತೊಂದರೆ ನೀಡದೆ ವಾಹನ ಓಡಿಸುತ್ತ ಬಂದಿದ್ದರೂ ನಿಲುಗಡೆಗೆ ಇನ್ನೂ ಸೂಕ್ತ ಸ್ಥಳ ಸಿಕ್ಕಿಲ್ಲ~ ಎಂದು ಹೇಳಿದರು.`ಮುಖ್ಯ ಬಸ್ ನಿಲ್ದಾಣ, ಚನ್ನಮ್ಮ ಪ್ರತಿಮೆ ಬಳಿ, ಮಲ್ಲಸರ್ಜ ವರ್ತುಲ ಹಾಗೂ ಊರೊಳಗಿನ ಬಸ್ ನಿಲ್ದಾಣದ ಹತ್ತಿರ ನಿಲುಗಡೆ ಮಾಡಲು ಸೂಕ್ತ ಸ್ಥಳಾವಕಾಶ ಮಾಡಿಕೊಡಬೇಕು. ಸರಕು ಸಾಗಣೆ ಮಾಡುವ ಮಿನಿ ವಾಹನಗಳು ಸರಕುಗಳ ಜೊತೆ ಪ್ರಯಾಣಿಕರನ್ನು ಸಾಗಿಸುತ್ತಿವೆ. ಸುತ್ತಲಿನ ಅನೇಕ ಗ್ರಾಮಗಳಿಂದ ಆಗಮಿಸುವ ಈ ವಾಹನಗಳು ಬಸ್ ನಿಲ್ದಾಣ ಹಾಗೂ ಪಟ್ಟಣದಲ್ಲಿ ಬಯಸಿದೆಡೆಗೆ ನಿಲುಗಡೆ ಮಾಡುತ್ತಿದ್ದಾರೆ.ಇದರಿಂದಾಗಿ ಆಟೋ ಹತ್ತುವವರ ಸಂಖ್ಯೆ ಕಡಿಮೆಯಾಗಿ ಅವರ ಉದ್ಯೋಗಕ್ಕೆ ತೊಂದರೆಯಾಗಿದೆ~ ಎಂದು ಶಿಂಧೆ ವಿವರಿಸಿದರು.ಗಡಿನಾಡು ಕನ್ನಡ ಸೇನೆ ಅಧ್ಯಕ್ಷ ಸಯ್ಯದ್ ಮನ್ಸೂರ ಮಾತನಾಡಿ, `ಈಗಾಗಲೇ ಆಟೋಗಳು ನಿಲ್ಲುವ ಕಡೆಗೆ ಅವರಿಗೆ ಸ್ಥಳದ ವ್ಯವಸ್ಥೆ ಮಾಡಿಕೊಡಬೇಕು. ಸರಕು ವಾಹನಗಳು ಪ್ರಯಾಣಿಕರನ್ನು ಟಾಪ್ ಮೇಲೆ ಹತ್ತಿಸಿಕೊಂಡು ಹೋಗುವುದನ್ನು ಪೊಲೀಸ್ ಇಲಾಖೆಯವರು ಸ್ಥಗಿತಗೊಳಿಸಬೇಕು. ಪಟ್ಟಣದಲ್ಲಿ ಸುಗಮವಾಗಿ ಆಟೋಗಳು ಸಂಚರಿಸಲು ಅನುಕೂಲವಾಗುವಂತೆ ಹದಗೆಟ್ಟು ಹೋಗಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು~ ಎಂದು ಆಗ್ರಹಿಸಿದರು. ಉಪ ತಹಸೀಲ್ದಾರ ವಿ. ಎಂ. ಗೋಠೆಕರ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಲಾಯಿತು.ಮುಕ್ತುಮ್‌ಸಾಬ್ ಡೋಂಗಿ, ಮಹಾಂತೇಶ ಲಂಗೋಟಿ, ಈರಯ್ಯ ಕಲಭಾಂವಿಮಠ, ಶಿವಾನಂದ ಕಂಬಿ, ನವೀನ ಬೆಳ್ಳೂರು, ರಾಮಕೃಷ್ಣ ಗಂಗಪ್ಪನವರ, ಸುಭಾಸ ಸಾಳುಂಕೆ, ಗಂಗಾಗಿರಿ ಬಾವಾನ್ನವರ, ಸಂತೋಷ ಗಣಾಚಾರಿ ಸೇರಿದಂತೆ ಪ್ರತಿಭಟನೆಯಲ್ಲಿ 70ಕ್ಕೂ ಹೆಚ್ಚು ಚಾಲಕರು ಆಟೋಗಳ ಸಮೇತ ಭಾಗವಹಿಸಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry