ಮಂಗಳವಾರ, ನವೆಂಬರ್ 12, 2019
28 °C

ಸ್ಥಳೀಯರಿಗೆ ಅವಕಾಶ: ಜೆಡಿಎಸ್

Published:
Updated:

ವೈಟ್‌ಫೀಲ್ಡ್: ಮಹದೇವಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಸ್ಥಳೀಯರಿಗೆ ಅವಕಾಶ ಕಲ್ಪಿಸುವಂತೆ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಅಶ್ವತ್ಥ್ ಅವರು ಪಕ್ಷದ ವರಿಷ್ಠರನ್ನು ಆಗ್ರಹಿಸಿದರು.ಮಂಗಳವಾರ ವರ್ತೂರಿನಲ್ಲಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾಲೋಚನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.`ಕಳೆದ ಸಾರಿ ನಡೆದ ಚುನಾವಣೆಯಲ್ಲಿ ಹೊರಗಿನ ಅಭ್ಯರ್ಥಿ ಸ್ಪರ್ಧಿಸಿದ್ದ ಕಾರಣ ಪಕ್ಷ ಸೋಲು ಅನುಭವಿಸಿತು. ಆದರೆ ಪ್ರಸ್ತುತ ಚುನಾವಣೆಯಲ್ಲಿ ರಾಜ್ಯ ವರಿಷ್ಠರು ಸ್ಥಳೀಯ ಅಭ್ಯರ್ಥಿಗೆ ಅವಕಾಶ ಕಲ್ಪಿಸಿದರೆ ಪಕ್ಷಕ್ಕೆ ಜಯ ಖಚಿತ' ಎಂದು ಅವರು ಹೇಳಿದರು.ಮುಖಂಡರಾದ ಗೋವರ್ಧನ್, ರಾಮಾಂಜಿನಪ್ಪ, ರಮೇಶ್ ಮಾತನಾಡಿದರು. ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ, ಪ್ರಧಾನ ಕಾರ್ಯದರ್ಶಿ ಭಾರತಿ, ಹೂಡಿ ವಾರ್ಡ್ ಅಧ್ಯಕ್ಷ ರಾಮಚಂದ್ರರೆಡ್ಡಿ, ನಂಜಾರೆಡ್ಡಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)